ಮೋಹನ್ ಕೋಡಿಂಬಾಳ ಅವರಿಗೆ ಉದ್ಯೋಗ ರತ್ನ ಪ್ರಶಸ್ತಿ

(ನ್ಯೂಸ್ ಕಡಬ) newskadaba.com ಕಡಬ, ಆ. 03. ಜೇಸಿಐ ಭಾರತದ ಪ್ರತಿಷ್ಠಿತ ಘಟಕವಾದ ಜೇಸಿಐ ಕಡಬ ಕದಂಬದ ಮಾಜಿ ಅಧ್ಯಕ್ಷರಾದ ಮೋಹನ್ ಕೋಡಿಂಬಾಳ ರವರಿಗೆ  ಜೇಸಿಐ ವಲಯ-15 ನೀಡುವ ಪ್ರತಿಷ್ಠಿತ  ‘ಉದ್ಯೋಗ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಜೇಸಿಐ ಶಂಕರನಾರಾಯಣ ಘಟಕದ ಆಶ್ರಯದಲ್ಲಿ ಹಾಲಾಡಿಯ ಶಾಲಿನಿ ಜಿ.ಶಂಕರ ಕನ್ವೆನ್ಸನ್‌ ಸೆಂಟರ್‌ನಲ್ಲಿ ನಡೆದ ವಲಯ 15ರ ಬೆಳವಣಿಗೆ ಮತ್ತು ಅಭಿವೃದ್ಧಿ ಸಮ್ಮೇಳನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಲಯಾಧ್ಯಕ್ಷ ಪುರುಷೋತ್ತಮ ಶೆಟ್ಟಿಯವರು ಪ್ರಶಸ್ತಿ ವಿತರಿಸಿದರು. ಕಡಬದಲ್ಲಿ ಬ್ಯಾಂಕ್ ಉದ್ಯೋಗಿಯಾಗಿರುವ ಮೋಹನ್ ಕೋಡಿಂಬಾಳ ಅವರು ಜೇಸಿಐ, ಒಕ್ಕಲಿಗ ಗೌಡ ಸಂಘಟನೆ ಸೇರಿದಂತೆ ಹಲವು ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದು ಉತ್ತಮ ಕ್ರೀಡಾಪಟು ಆಗಿದ್ದು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ವಲಯ ಉಪಾಧ್ಯಕ್ಷ ಅಜಿತ್‌ ಕುಮಾರ್ ರೈ,  ವಲಯದ ಕಾರ್ಯದರ್ಶಿ ಕಾಶೀನಾಥ್, ಕಡಬ ಘಟಕದ ಅಧ್ಯಕ್ಷ ಅಭಿಷೇಕ್, ಕಾರ್ಯದರ್ಶಿ ರಾಜೇಶ್ ಹಾಗೂ ಜೀವಿತ್ ಗೌಡ ಉಪಸ್ಥಿತರಿದ್ದರು.

Also Read  ಸರಸ್ವತೀ ವಿದ್ಯಾಲಯ ಪ್ರೌಢಶಾಲೆ ಕಡಬ- ಜೇಸೀ ಸಪ್ತಾಹದ ಅಂಗವಾಗಿ ಪರಿಸರ ವೀಕ್ಷಣಾ ಕಾರ್ಯಕ್ರಮ

error: Content is protected !!
Scroll to Top