13 ಲಕ್ಷ ರೂ. ಖರ್ಚು ಮಾಡಿ ನಾಯಿಯಾದ ಮಾನವ

(ನ್ಯೂಸ್ ಕಡಬ)newskadaba.com ಟೋಕಿಯೊ, ಆ.03. ನಮ್ಮ ಸುತ್ತಮುತ್ತ ಹಲವಾರು ವಿಸ್ಮಯಗಳು ನಡೆಯುತ್ತಿದೆ ಆದರೆ, ಜಪಾನ್ ಟೋಕೊ ಎಂಬಲ್ಲಿ ಟೋಕೊ ಎಂಬ ವ್ಯಕ್ತಿಯು ಸುಮಾರು 13 ಲಕ್ಷ ಖರ್ಚು ಮಾಡಿ ತಾನು ನಾಯಿಯಾಗಿ ಬದಲಾಗಿದ್ದು, ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

“ಮಂಗನಿಂದ ಮಾನವ” ಎಂಬ ಮಾತಿದೆ. ಇದೇ ಕಾರಣಕ್ಕೆ ಮನುಷ್ಯ ಕೆಲವೊಮ್ಮೆ ಮಂಗನ ಹಾಗೆ ವರ್ತಿಸುವುದು ಎಂಬ ಮಾತೂ ಇದೆ. ಆದರೆ, ಜಪಾನ್‌ನಲ್ಲಿ ಮಾನವನೊಬ್ಬ ಶ್ವಾನವಾಗಿ ಬದಲಾಗಿದ್ದಾನೆ. ಹೀಗೆ, ಮಾನವನಿಂದ ಶ್ವಾನವಾಗಿ ಬದಲಾಗಲು ಆತ 13.24 ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆ ಎಂಬುದು ಗಮನಾರ್ಹವಾಗಿದೆ. ಜಪಾನ್‌ನ ಜೆಪೆಟ್ ಎಂಬ ಕಂಪನಿಯು ಈತನಿಗಾಗಿ ಕೊಲಿ ನಾಯಿಯ ಕಾಸ್ಟ್ಯೂಮ್ ತಯಾರಿಸಿದೆ. ಈಗ ಈತನು ನಾಲ್ಕು ಕಾಲಿನಿಂದ ಓಡಾಡಿಕೊಂಡಿದ್ದಾನೆ. ಯುವತಿಯೊಬ್ಬಳು ಕೊಲಿ ನಾಯಿಯನ್ನು ಹಿಡಿದುಕೊಂಡು ತಿರುಗಾಡುವ, ಆ ಕೃತಕ ನಾಯಿಯು ರಸ್ತೆ ಮೇಲೆ ಹೊರಳಾಡುವ ವಿಡಿಯೊ ಸಂಚಲನ ಮೂಡಿಸಿದೆ.

Also Read  SKIMVB ಕೇಂದ್ರೀಯ ಸದಸ್ಯರಾಗಿ ಶರೀಫ್ ಫೈಝಿ ಕಡಬ ಆಯ್ಕೆ

 

error: Content is protected !!
Scroll to Top