ಚಾರ್ಮಾಡಿ ಘಾಟಿ ಜಲಪಾತದ ಬಳಿ ಪ್ರವಾಸಿಗರ ಹುಚ್ಚಾಟ – ಪೊಲೀಸ್ ರ ನಿಯೋಜನೆ

(ನ್ಯೂಸ್ ಕಡಬ)newskadaba.com ಮೂಡಿಗೆರೆ, ಆ.03. ಕುಂದಾಪುರದ ಅರಶಿನಗುಂಡಿ ಜಲಪಾತದಲ್ಲಿ ರೀಲ್ಸ್ ಮಾಡಲು ಹೋಗಿ ಜಲಪಾತಕ್ಕೆ ಬಿದ್ದು ದಾವಣಗೆರೆಯ ಶರತ್ ಮೃತಪಟ್ಟ ಘಟನೆ ನಡೆದ ಬಳಿಕವೂ ಪ್ರವಾಸಿಗರು ಜಲಪಾತಗಳಲ್ಲಿ ಅಪಾಯಕಾರಿಯಾಗಿ ಸೆಲ್ಫಿ, ರೀಲ್ಸ್ ಮಾಡುವುದು ಕಂಡುಬಂದಿದೆ ಎನ್ನಲಾಗಿದೆ.

ಅಲ್ಲದೆ ಚಾರ್ಮಾಡಿ ಘಾಟಿಯಲ್ಲಿ ಇರುವ ಜಲಪಾತಗಳಲ್ಲಿ ಪ್ರವಾಸಿಗರು ಹುಚ್ಚಾಟ ನಡೆಸಿ ಸೆಲ್ಫಿ ತೆಗೆದುಕೊಳ್ಳುವ ಪ್ರಕರಣಗಳು ಹೆಚ್ಚಾಗಿದ್ದು, ಇದಕ್ಕೆಲ್ಲಾ ಕಡಿವಾಣ ಹಾಕಲು ಇದೀಗ ಜಲಪಾತದ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಚಾರ್ಮಾಡಿ ಜಲಪಾತಗಳ ಬಳಿ ರಸ್ತೆ ಮಧ್ಯೆ ಗಾಡಿ ನಿಲ್ಲಿಸಿಕೊಂಡು ಕುಣಿಯುತ್ತಿದ್ದ ಪ್ರವಾಸಿಗರು ಜಾರುವ ಬಂಡೆಗಳ ಮೇಲೆ ಹತ್ತಿ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಂದಾಗುತ್ತಿದ್ದರು, ಅಷ್ಟು ಮಾತ್ರವಲ್ಲದೆ ರಸ್ತೆ ಮಧ್ಯೆ ಕುಣಿಯೋ ಧಾವಂತದಲ್ಲಿ ವಾಹನಗಳಿಗೂ ಅಡ್ಡ ಹೋಗುತ್ತಿದ್ದರು ಇದರಿಂದ ಒಮ್ಮೆ ರೋಗಿ ಹೊತ್ತ ಆಂಬುಲೆನ್ಸ್ ಕೂಡ ಪರದಾಟ ನಡೆಸಿತ್ತು. ಇದೀಗ ಜಲಪಾತಗಳ ಹೈವೆ ಪೆಟ್ರೋಲ್ ಪೊಲೀಸರ ನಿಯೋಜನೆ ಮಾಡಲಾಗಿದ್ದು ಇಡೀ ದಿನ ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಲಿದ್ದಾರೆ.

 

error: Content is protected !!

Join the Group

Join WhatsApp Group