ಆನ್ಲೈನ್ ನಲ್ಲಿ 5.90 ಲಕ್ಷ ವಂಚನೆ..! – ದೂರು ದಾಖಲು

(ನ್ಯೂಸ್ ಕಡಬ)newskadaba.com ಮಂಗಳೂರು, ಆ.03. ಯನೈಟೆಡ್ ಕಿಂಗ್‌ಡಂನಿಂದ ಉಡುಗೊರೆ ಕಳುಹಿಸುವುದಾಗಿ ಹೇಳಿ ಸುಮಾರು 5.90 ಲಕ್ಷ ರೂ. ಪಡೆದು ವಂಚಿಸಿರುವ ಬಗ್ಗೆ ಮಂಗಳೂರು ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಾಟ್ಸ್ ಆ್ಯಪ್ ಮೂಲಕ ಕರೆ ಮಾಡಿದ ಅಪರಿಚಿತ ವ್ಯಕ್ತಿ ತನ್ನನ್ನು ಡಾ. ಫ್ರಾಕ್ಲಿನ್ ಪ್ಯಾಟ್ರಿಕ್ ಎಂದು ಪರಿಚಯಿಸಿಕೊಂಡು ಯುನೈಟೆಡ್ಕಿಂ ಗ್‌ಡಮ್‌ನಲ್ಲಿ ವೈದ್ಯನಾಗಿದ್ದೇನೆ ಎಂದು ಹೇಳಿಕೊಂಡಿದ್ದು, ಕೆಲವು ದಿನಗಳ ಬಳಿಕ ಆತ ತನ್ನ ಮಗಳ ಬರ್ತ್‌ಡೇಗೆ ವಿದೇಶಿ ಕರೆನ್ಸಿ, ಚಿನ್ನಾಭರಣ ಮತ್ತು ಇತರ ವಸ್ತುಗಳನ್ನು ಉಡುಗೊರೆಯಾಗಿ ಕಳುಹಿಸುವುದಾಗಿ ತಿಳಿಸಿದ್ದ ಎನ್ನಲಾಗಿದೆ.


ಇನ್ನೋರ್ವ ಅಪರಿಚಿತ ವ್ಯಕ್ತಿಯು ತನಗೆ ಕರೆ ಮಾಡಿ ನಿಮಗೆ ಪಾರ್ಸೆಲ್ ಬಂದಿದ್ದು, ದಿಲ್ಲಿಗೆ ತಲುಪಿದೆ. ಅದರ ಪ್ರೊಸೆಸಿಂಗ್ ಶುಲ್ಕ ಪಾವತಿಸಬೇಕು ಎಂದಿದ್ದ. ತನ್ನ ಖಾತೆಯಿಂದ 40,000 ರೂ.ಗಳನ್ನು ಪ್ರೊಸೆಸಿಂಗ್ ಶುಲ್ಕವೆಂದು ಗೂಗಲ್‌ ಪೇ ಮಾಡಿದ್ದರು ಎನ್ನಲಾಗಿದೆ. ಅಪರಿಚಿತ ವ್ಯಕ್ತಿ ಕರೆ ಮಾಡಿ ವಿವಿಧ ಕಾರಣ ನೀಡಿ ಹಂತ ಹಂತವಾಗಿ 5.90 ಲಕ್ಷ ರೂ.ವನ್ನು ಪಡೆದು ವಂಚಿಸಿದ್ದಾನೆ ಎಂದು ವಂಚನೆಗೊಳಗಾದ ವ್ಯಕ್ತಿ ದೂರು ನೀಡಿದ್ದಾರೆ.

Also Read  ಗಿನ್ನಿಸ್ ದಾಖಲೆಯ ವೀರ ಗೋಪಾಲ್ ಖಾರ್ವಿ ರಾಷ್ಟ್ರಮಟ್ಟಕ್ಕೆ ಆಯ್ಕೆ

error: Content is protected !!
Scroll to Top