ಭೂಮಿಯ ಕಕ್ಷೆ ತೊರೆದು ಚಂದ್ರನತ್ತ ಸಾಗಿದ ಚಂದ್ರಯಾನ- 3

(ನ್ಯೂಸ್ ಕಡಬ) newskadaba.com ಇಸ್ರೋ, ಆ. 01. ಇಸ್ರೋದ ಮಹತ್ವಾಕಾಂಕ್ಷಿ ಚಂದ್ರಯಾನ-3ರ ಬಾಹ್ಯಾಕಾಶ ನೌಕೆ ಭೂಮಿಯ ಕಕ್ಷೆಯಿಂದ ಚಂದ್ರನ ಕಕ್ಷೆಯತ್ತ ಪಯಣ ಮುಂದುವರಿಸಿದೆ.

ಈಗಾಗಲೇ ಚಂದ್ರಯಾನ-3 ಬಾಹ್ಯಾಕಾಶ ನೌಕೆಯನ್ನು ಟ್ರಾನ್ಸ್‌ ಲೂನಾರ್ ಕಕ್ಷೆಗೆ ಸೇರಿಸಿದ್ದು, ಇನ್ನೇನು ನೌಕೆ ಚಂದ್ರನ ಕಡೆಗೆ ಸಾಗುತ್ತಿದೆ ಎಂದು ಇಸ್ರೋ ತಿಳಿಸಿದೆ. ಇಸ್ರೋ ಟೆಲಿಮಿಟ್ರಿ, ಟ್ರ್ಯಾಕಿಂಗ್ ಹಾಗೂ ಕಮಾಂಡ್ ನೆಟ್‌ ವರ್ಕ್‌ನಲ್ಲಿ ಯಶಸ್ವಿ ಪೆರಿಜಿ-ಫೈರಿಂಗ್ ಪೂರೈಸಿದೆ. ಇನ್ನು ನೌಕೆಯ ಸ್ಟಾಪ್ ಚಂದ್ರನ ಅಂಗಳವಾಗಿದೆ. ಚಂದ್ರನ ಬಳಿಗೆ ತಲುಪಿದ ನಾಲ್ಕು ದಿನದಲ್ಲಿ ಲೂನಾರ್-ಆರ್ಬಿಟ್ ಅಳವಡಿಕೆ ಮಾಡಲಾಗುವುದು ಎಂದು ಇಸ್ರೋ ತಿಳಿಸಿದೆ.


ಚಂದ್ರನ ಮೇಲೆ ನೌಕೆ ಸಾಫ್ಟ್ ಲ್ಯಾಂಡಿಂಗ್ ಆಗುವುದಕ್ಕೆ ಇಡೀ ದೇಶವೇ ಎದುರು ನೋಡುತ್ತಿದೆ. ಈವರೆಗೂ ಚೀನಾ, ಅಮೆರಿಕ ಹಾಗೂ ರಷ್ಯಾ ಮಾತ್ರ ಚಂದ್ರನ ಮೇಲೆ ತಮ್ಮ ನೌಕೆಯನ್ನು ಲ್ಯಾಂಡಿಂಗ್ ಮಾಡಿದ್ದವು.

error: Content is protected !!

Join the Group

Join WhatsApp Group