5ನೇ ಮಹಡಿಯಿಂದ ಬಿದ್ದು ಮೆಡಿಕಲ್ ವಿದ್ಯಾರ್ಥಿ ಮೃತ್ಯು..!

Death, deadbody, Waterfall

(ನ್ಯೂಸ್ ಕಡಬ) newskadaba.com com ಮಂಗಳೂರು, ಜು. 31. ಅಪಾರ್ಚ್‌ಮೆಂಟ್‌ ನ 5ನೇ ಮಹಡಿಯಿಂದ ಜಾರಿ ಬಿದ್ದು ಮೆಡಿಕಲ್‌ ಕಾಲೇಜು ವಿದ್ಯಾರ್ಥಿಯೋರ್ವ ದಾರುಣವಾಗಿ ಮೃತಪಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಮೂಲತಃ ಅಡ್ಯಾರು ನಿವಾಸಿ, ಪ್ರಸ್ತುತ ಕದ್ರಿ ಶಿವಭಾಗ್‌ ನಲ್ಲಿ ವಾಸವಾಗಿದ್ದ ಸಮಯ್‌ (21) ಎಂದು ಗುರುತಿಸಲಾಗಿದೆ. ಈತ ತನ್ನ ಫ್ಲ್ಯಾಟ್‌ ನ ಬಾಲ್ಕನಿಯಲ್ಲಿ ಬೆಳಗ್ಗಿನ ಸಮಯ ಓದುತ್ತಿದ್ದಾಗ ಅವರ ತಾಯಿ ಕಾರು ತೊಳೆಯಲೆಂದು ನೆಲಮಹಡಿಗೆ ಹೋಗೋಣ ಎಂದು ಹೇಳಿ ಕೆಳಗೆ ಹೋಗಿದ್ದರು. ಅವರಿಗೆ ಸಹಾಯ ಮಾಡಲು ಬಕೆಟ್‌ ತೆಗೆದುಕೊಂಡು ಬರುವುದಾಗಿ ಹೇಳಿ ಸಮಯ್‌ ಅವರು ಬಾತ್‌ ರೂಂಗೆ ಹೋಗಿದ್ದಾರೆ. ಆ ವೇಳೆಗಾಗಲೇ ಅವರ ತಾಯಿ ನೆಲಮಹಡಿ ತಲುಪಿದ್ದರು. ಇತ್ತ ಸಮಯ್‌, ಫ್ಲ್ಯಾಟ್‌ ನ ಬಾಲ್ಕನಿಗೆ ಬಂದು ಕಾರು ತೊಳೆಯಲು ಬಕೆಟ್‌ ತೆಗೆದುಕೊಂಡು ಹೋಗಿದ್ದೀರಾ ಎಂದು ತಾಯಿ ಬಳಿ ಕೇಳಲು ಬಗ್ಗಿದ್ದರು. ಆದರೆ ಮಳೆ ನೀರಿನ ಹನಿಯಿಂದ ಜಾರಿ ಕೆಳಗೆ ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನಲಾಗಿದೆ. ಈ ಕುರಿತು ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಕಾಡಾನೆ ದಾಳಿಗೆ ಸಾಕಾನೆ "ರಾಜೇಂದ್ರ" ಸಾವು.!

error: Content is protected !!
Scroll to Top