ಆದಾಯ ತೆರಿಗೆದಾರರೇ ಗಮನಿಸಿ- ಐಟಿ ರಿಟರ್ನ್ಸ್ ಗೆ ಕೊನೆಯ 3 ದಿನಗಳು ಬಾಕಿ

(ನ್ಯೂಸ್ ಕಡಬ) newskadaba.com ನವದೆಹಲಿ, ಜು. 29. ಆದಾಯ ತೆರಿಗೆದಾರರಿಗೆ ಹಣಕಾಸು ಸಚಿವಾಲಯವು ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, 2023 ಏಪ್ರಿಲ್-ಜುಲೈ ವರೆಗಿನ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿದೆ.

ನಾಲ್ಕು ತಿಂಗಳ ಅವಧಿಯು ಏಪ್ರಿಲ್ 1 ರಂದು ಪ್ರಾರಂಭಗೊಂಡು ಜುಲೈ 31 ರಂದು ಕೊನೆಗೊಳ್ಳುತ್ತದೆ. ಈ ಗಡುವಿನೊಳಗೆ ನೀವು ನಿಮ್ಮ ಐಟಿಆರ್ ಸಲ್ಲಿಸದಿದ್ದಲ್ಲಿ ಭಾರೀ ದಂಡವನ್ನು ಪಾವತಿಸಬೇಕಾಗುತ್ತದೆ ಮತ್ತು ನೀವು ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಪಡೆಯಬಹುದು.

ಜುಲೈ 31 ರ ಗಡುವನ್ನು ತೆರಿಗೆದಾರರು ತಪ್ಪಿಸಿಕೊಂಡಲ್ಲಿ ತಡವಾಗಿ ಐಟಿಆರ್ ಸಲ್ಲಿಸುವ ಆಯ್ಕೆಯನ್ನು ಹೊಂದಿದ್ದಾರೆ. ತಡವಾಗಿ ಐಟಿಆರ್ ಸಲ್ಲಿಸಲು ಕೊನೆಯ ದಿನಾಂಕ 2022-23ರ ಹಣಕಾಸು ವರ್ಷಕ್ಕೆ (ಎವೈ 2023-24) ಡಿಸೆಂಬರ್ 31 ಆಗಿದೆ. ನಿಗದಿತ ದಿನಾಂಕದ ನಂತರ (ಅಂದರೆ ಜುಲೈ 31) ಮತ್ತು ಡಿಸೆಂಬರ್ 31 ರಂದು ಅಥವಾ ಅದಕ್ಕೂ ಮೊದಲು ಐಟಿಆರ್ ಸಲ್ಲಿಸಿದರೆ, ವಿಳಂಬ ಫೈಲಿಂಗ್ ಶುಲ್ಕವನ್ನು ವಿಧಿಸಲಾಗುತ್ತದೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 234 ಎಫ್ ಪ್ರಕಾರ, ನೀವು ಜುಲೈ 31 ರ ನಿಗದಿತ ದಿನಾಂಕದ ನಂತರ ನಿಮ್ಮ ಐಟಿಆರ್ ಅನ್ನು ಸಲ್ಲಿಸಿದರೆ, ಆದರೆ ಡಿಸೆಂಬರ್ 31, 2023 ರ ಮೊದಲು, ನೀವು ಗರಿಷ್ಠ 5,000 ರೂ.ಗಳ ದಂಡವನ್ನು ಕಟ್ಟಬೇಕಾಗುತ್ತದೆ. ಒಟ್ಟು 5 ಲಕ್ಷ ರೂ.ವರೆಗಿನ ಆದಾಯ ಹೊಂದಿರುವವರು 1,000 ರೂ.ಗಳ ದಂಡವನ್ನು ಪಾವತಿಸಬೇಕಾಗುತ್ತದೆ.

error: Content is protected !!

Join the Group

Join WhatsApp Group