ಬಿಸ್ಕೆಟ್ ಕೊಡಿಸುವುದಾಗಿ ನಂಬಿಸಿ ಬಾಲಕಿಯ ಅತ್ಯಾಚಾರ  – ಕಾರ್ಮಿಕನ ಬಂಧನ !!

(ನ್ಯೂಸ್ ಕಡಬ)newskadaba.com ಉಡುಪಿ, ಜು.28. ಪಡುಬಿದ್ರಿಯಲ್ಲಿ ವ್ಯಕ್ತಿಯೊಬ್ಬ ಬಾಲಕಿಗೆ ಬಿಸ್ಕತ್ತು ಕೊಡಿಸುವುದಾಗಿ ಆಕೆಯ ತಂದೆ, ತಾಯಿಗೆ ತಿಳಿಸಿ ತನ್ನ ರೂಮಿಗೆ ಕರೆದೊಯ್ದು ಲೈಂಗಿಕ ದೌರ್ಜನ್ಯವೆಸಗಿರುವ ಘಟನೆ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ಪಶ್ಚಿಮ ಬಂಗಾಲದ ಮುರ್ಷಿದಾಬಾದ್‌ ಜಿಲ್ಲೆಯ ಹಾಝಿಗಂಝ್ ಅಮ್ದಾಹರದ ನಿವಾಸಿ ಆರೋಪಿ ಮುಫೀಜುಲ್‌ ಶೇಖ್‌ (26)ನನ್ನು ಪಡುಬಿದ್ರಿ ಪೊಲೀಸರು ಬಂಧಿಸಿದ್ದಾರೆ. ಪಡುಬಿದ್ರಿಯಲ್ಲಿ ನಿರ್ಮಾಣ ಹಂತದಲ್ಲಿರುವ ಬಹುಮಹಡಿ ವಸತಿ ಸಂಕೀರ್ಣದಲ್ಲಿ ಕಾರ್ಮಿಕನಾಗಿರುವ ಆರೋಪಿಯು ಅಲ್ಲೇ ದುಡಿಯುತ್ತಿದ್ದು, ಅದೇ ಮುರ್ಷಿದಾಬಾದ್‌ ಜಿಲ್ಲೆಯ ದಂಪತಿಯ ಐದು ವರ್ಷದ ಪುತ್ರಿಯನ್ನು ಮಧ್ಯಾಹ್ನದ ವೇಳೆ ಪುಸಲಾಯಿಸಿ ಅದೇ ಕಟ್ಟಡದ ಮೂರನೇ ಮಹಡಿಯಲ್ಲಿನ ತನ್ನ ರೂಮಿಗೆ ಕರೆದೊಯ್ದಿದ್ದ ಆರೋಪಿಯು ಬಾಲಕಿಯನ್ನು ಬಲವಂತವಾಗಿ ಅತ್ಯಾಚಾರಗೈದಿದ್ದ ಎನ್ನಲಾಗಿದೆ.

Also Read  ಅಕ್ರಮ ಮರಳುಗಾರಿಕೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದವರ ಮೇಲೆ ಕೊಲೆಗೆ ಯತ್ನ

error: Content is protected !!
Scroll to Top