ಲೋನ್ ಆ್ಯಪ್ ಮೂಲಕ ಸಾಲ ಪಡೆಯುವವರೇ ಎಚ್ಚರ – ಸಾಲ ಮರುಪಾವತಿಸಿದರೂ ಯುವಕನ ಫೋಟೋ ಅಶ್ಲೀಲಗೊಳಿಸಿ ವೈರಲ್- ದೂರು ದಾಖಲು

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 28. ಲೋನ್ ಆ್ಯಪ್ ಮೂಲಕ 4,200 ರೂ. ಸಾಲ ಪಡೆದ ವ್ಯಕ್ತಿಯ ಚಿತ್ರವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ವೈರಲ್ ಮಾಡಿರುವ ಬಗ್ಗೆ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದೂರುದಾದರರ ಪ್ರಕಾರ, ತಾನು ಲೋನ್ ಆ್ಯಪ್ ಮೂಲಕ 3,500 ರೂ. ಸಾಲಕ್ಕೆ ಅರ್ಜಿ ಹಾಕಿದ ಬಳಿಕ ತನ್ನ ಬ್ಯಾಂಕ್ ಖಾತೆಗೆ 2,800 ರೂ. ಜಮೆಯಾಗಿದೆ. ಈ ಸಾಲವನ್ನು ಜು. 26ಕ್ಕೆ ಮುಂಚಿತವಾಗಿ ಮರುಪಾವತಿ ಮಾಡಬೇಕಾಗಿದುದ್ದರಿಂದ ಜು.19ರಂದು 1,400 ರೂ. ಮರುಪಾವತಿ ಮಾಡಲಾಗಿದೆ. ಉಳಿದ ಹಣವನ್ನು ಜು. 26ರಂದು ಆಪ್ ನವರು ಕಳುಹಿಸಿರುವ ಯುಪಿಐ ಐಡಿಗೆ ಹಂತಹಂತವಾಗಿ 4200 ರೂ. ಹಣವನ್ನು ಪಾವತಿ ಮಾಡಿರುತ್ತೇನೆ.

ಇದಾದ ಬಳಿಕ ಅಪರಿಚಿತ ವ್ಯಕ್ತಿಯು ತನ್ನ ಕಾಂಟಾಕ್ಟ್ ಲಿಸ್ಟ್‌ನಲ್ಲಿರುವ ತಂದೆಯ, ಸಂಬಂಧಿಕರ ಹಾಗೂ ಕಾಲೇಜಿನ ಅಧ್ಯಾಪಕರ ವಾಟ್ಸಪ್ ನಂಬರ್‌ಗಳಿಗೆ ತನ್ನ ಮತ್ತು ಇತರರ ಭಾವಚಿತ್ರವನ್ನು ಅಶ್ಲೀಲಗೊಳಿಸಿ ಲೋನ್ ಪಾವತಿ ಮಾಡಿರುವುದಿಲ್ಲವೆಂದು ಸಂದೇಶ ರವಾನಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

error: Content is protected !!

Join the Group

Join WhatsApp Group