ಗೃಹಸಚಿವ ನಿವಾಸಕ್ಕೆಮುತ್ತಿಗೆ ಹಾಕಿದ ಯುವಮೋರ್ಚಾ ಕಾರ್ಯಕರ್ತರು

(ನ್ಯೂಸ್ ಕಡಬ) newskadaba.com  ಬೆಂಗಳೂರು, ಜು. 27. ಡಿಜೆ ಹಳ್ಳಿ ಕೆ.ಜಿ.ಹಳ್ಳಿ ಗಲಭೆ ಪ್ರಕರಣದ ಆರೋಪಿಗಳ ವಿರುದ್ಧ ಈಗಾಗಲೇ ಸಲ್ಲಿಸಲಾಗಿರುವ  ಮೊಕದ್ದಮೆಗಳನ್ನು ಹಿಂಪಡೆಯುವ ಪ್ರಕ್ರಿಯೆಯನ್ನು ವಿರೋಧಿಸಿ ಬಿಜೆಪಿ ಯುವಮೋರ್ಚಾದ ಕಾರ್ಯಕರ್ತರು ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರ ಮನೆಗೆ ಇಂದು ಬೆಳಗ್ಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದ ಕುರಿತು ವರದಿಯಾಗಿದೆ.

ಸದಾಶಿವ ನಗರದಲ್ಲಿರುವ ಜಿ.ಪರಮೇಶ್ವರ್ ಅವರ ಖಾಸಗಿ ನಿವಾಸಕ್ಕೆ ಮೆರವಣಿಗೆ ಮೂಲಕ ದಿಢೀರ್ ಆಗಮಿಸಿದ ಕಾರ್ಯಕರ್ತರು, ಮೊದಲಿಗೆ ಸಾಮಾನ್ಯ ವಿದ್ಯಾರ್ಥಿಗಳಂತೆ ನಡೆದುಕೊಂಡು ಬಂದ ಕಾರ್ಯಕರ್ತರು ಇದ್ದಕ್ಕಿದ್ದಂತೆ ಬಿಜೆಪಿ ಬಾವುಟವಿರುವ ಶಲ್ಯಗಳನ್ನು ತೆಗೆದು ಕತ್ತಿಗೆ ಸುತ್ತಿಕೊಂಡು ಪರಮೇಶ್ವರ್ ಅವರ ಮನೆಯತ್ತ ಧಾವಿಸಿ ಬಂದಿದ್ದಾರೆ. ಸ್ವಲ್ಪದರಲ್ಲೇ ಅಲರ್ಟ್ ಆದ ಪೊಲೀಸರು ಬ್ಯಾರಿಕೇಡ್ ಹಾಕಿ ವಿದ್ಯಾರ್ಥಿಗಳನ್ನು ತಡೆದಿದ್ದಾರೆ. ದೇಶದ ಭದ್ರತೆಗೆ ಧಕ್ಕೆ ತರುವಂತಹ ಕೃತ್ಯಗಳಲ್ಲಿ ಭಾಗಿಯಾದ ಆರೋಪಿಗಳನ್ನು ರಕ್ಷಿಸಲು ರಾಜ್ಯಸರ್ಕಾರ ಯತ್ನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೇ, ಪ್ರತಿಭಟನಾಕಾರರು ಕಾಂಗ್ರೆಸ್ ಪಕ್ಷಕ್ಕೆ ಧಿಕ್ಕಾರ ಕೂಗಿದ್ದಾರೆ.

Also Read  24ರ ಯುವಕನಿಂದ 15ರ ಬಾಲಕನ ಮೇಲೆ ಅತ್ಯಾಚಾರ..!!

ಡಿಜೆ ಹಳ್ಳಿ, ಕೆ.ಜಿ. ಹಳ್ಳಿ, ಶಿವಮೊಗ್ಗ ಹಾಗೂ ಹುಬ್ಬಳ್ಳಿಗಳಲ್ಲಿ ನಡೆದಿರುವಂತಹ ಕೋಮು ಆಧಾರಿತ ಗಲಭೆ ಪ್ರಕರಣಗಳಲ್ಲಿ ಅಮಾಯಕರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಮರುಪರಿಶೀಲಿಸುವಂತೆ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಪತ್ರ ಬರೆದಿದ್ದರು. ಇದನ್ನಾಧರಿಸಿ ಗೃಹಸಚಿವ ಡಾ.ಜಿ.ಪರಮೇಶ್ವರ್ ಗೃಹ ಇಲಾಖೆಗೆ ಟಿಪ್ಪಣಿ ರವಾನೆ ಮಾಡಿದ್ದರು. ಇದು ವಿವಾದಕ್ಕೆ ಕಾರಣವಾಗಿದೆ. ದೇಶದ್ರೋಹಗಳಂತಹ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯುವುದು ಸಂವಿಧಾನ ಬಾಹಿರ. ಇದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಯುವ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ. ಸದಾಶಿವ ನಗರ ಪೊಲೀಸರು ಸ್ಥಳಕ್ಕಾಗಮಿಸಿ ವಿದ್ಯಾರ್ಥಿ ನಾಯಕರನ್ನು ವಶಕ್ಕೆ ಪಡೆದುಕೊಂಡರು ಎಂದು ವರದಿಯಾಗಿದೆ.

Also Read  ಸೆ. 5 ರಿಂದ 7: ಬಿಜೆಪಿ ಯುವ ಮೋರ್ಚಾದಿಂದ ► 'ಮಂಗಳೂರು ಚಲೋ' ಬೈಕ್ ರಾಲಿ

error: Content is protected !!
Scroll to Top