ಇನ್ಮುಂದೆ ಶಾಲೆಗಳಲ್ಲಿ ಮೊಬೈಲ್ ಫೋನ್ ನಿಷೇಧ – ಯುನೆಸ್ಕೋ ಮಹತ್ವದ ಮಾಹಿತಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 26. ಇನ್ನುಮುಂದೆ ಶಾಲೆಗಳಲ್ಲಿ ಮೊಬೈಲ್ ಫೋನ್ ನಿಷೇಧಿಸಲು ಯುನೆಸ್ಕೋ ಸೂಚಿಸಿದೆ. ಈ ಕುರಿತು ವಿಶೇಷ ವರದಿ ಬಿಡುಗಡೆ ಮಾಡಿರುವ ಯುನೆಸ್ಕೋ, ಸೈಬರ್ ಅಪರಾಧಗಳಂತಹ ಬೆದರಿಕೆಯಿಂದ ವಿದ್ಯಾರ್ಥಿಗಳನ್ನು ರಕ್ಷಿಸಲು ಇದು ಸರಿಯಾದ ಮಾರ್ಗ. ಹೆಚ್ಚಿನ ಸಮಯ ಮೊಬೈಲ್ ಬಳಸುವುದರಿಂದ ಅವರ ಓದುವಿಕೆಯ ದಾರಿ ತಪ್ಪುತ್ತದೆ, ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದೆ.

 

ವಿದ್ಯಾರ್ಥಿಗಳಿಗೆ ಡಿಜಿಟಲ್ ತಂತ್ರಜ್ಞಾನದ ಬಗ್ಗೆ ಸರಿಯಾದ ತಿಳುವಳಿಕೆ ನೀಡಬೇಕು. ಕೃತಕ ಬುದ್ಧಿಮತ್ತೆಯ ಬಗ್ಗೆಯೂ ಚರ್ಚಿಸಲು ಹೇಳಿದೆ. ಶಿಕ್ಷಣ ವ್ಯವಸ್ಥೆಯಲ್ಲಿ ತಂತ್ರಜ್ಞಾನವನ್ನು ಅಳವಡಿಸುವಾಗ ಅತ್ಯಂತ ಜಾಗರೂಕರಾಗಿರಿ ಎಂದು ಎಚ್ಚರಿಸಿದೆ.

ವಿದ್ಯಾರ್ಥಿಗಳು ಕಲಿಯುವ ವಿಧಾನದಲ್ಲಿ ಬದಲಾವಣೆ ಉತ್ತಮವಾಗಿದ್ದರೂ, ಅದು ತುಂಬಾ ದೂರ ಹೋದರೆ ಅಪಾಯಕಾರಿ ಎಂದು ಯುನೆಸ್ಕೋ ತೀರ್ಮಾನಿಸಿದೆ.

Also Read  ಪಡುಬಿದ್ರೆಯಲ್ಲಿ ಆಡುಗಳ ಮೇಲೆ ಚಿರತೆ ದಾಳಿ: ಸ್ಥಳೀಯರಲ್ಲಿ ಆತಂಕ

ಸಾಮಾಜಿಕ ಸ್ಥಿತಿಗತಿಗಳಿಗೆ ಅನುಗುಣವಾಗಿ ಶಿಕ್ಷಣ ವ್ಯವಸ್ಥೆ ಇರಬೇಕು. ಎಲ್ಲ ಶಿಕ್ಷಣ ಸಂಸ್ಥೆಗಳು ಈ ಬಗ್ಗೆ ಗಮನಹರಿಸಬೇಕು. ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಮುಖಾಮುಖಿ ಮಾತನಾಡಬೇಕು. ಆನ್‌ ಲೈನ್‌ನಲ್ಲಿ ಎಲ್ಲವನ್ನೂ ಕಲಿಯಲು ಸಾಧ್ಯವಿದೆ. ವಿಶೇಷವಾಗಿ ವಿಶ್ವವಿದ್ಯಾಲಯಗಳಲ್ಲಿ ಈ ತಂತ್ರಜ್ಞಾನ ಉತ್ತಮವಾಗಿ ಕಾಣುತ್ತಿದೆ. ಅವರ ಕಲಿಕೆಯಲ್ಲಿ ಯಾವುದೇ ತಪ್ಪಿಲ್ಲದಿದ್ದರೂ ಶಿಕ್ಷಣ ವ್ಯವಸ್ಥೆಯ ಬೇರುಗಳನ್ನು ಅಳಿಸಿ ಹಾಕುವ ರೀತಿಯಲ್ಲಿರಬಾರದು. ಅದಕ್ಕಾಗಿಯೇ ಸಾಂಪ್ರದಾಯಿಕ ಬೋಧನೆಗೂ ಗಮನ ನೀಡಬೇಕು. ತಂತ್ರಜ್ಞಾನ ಏನೇ ಇರಲಿ, ಅಂತಿಮವಾಗಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಚಿಂತನೆಯ ವ್ಯಾಪ್ತಿಯನ್ನು ಹೆಚ್ಚಿಸಿ. ಒಬ್ಬರಿಗೊಬ್ಬರು ಪರಸ್ಪರ ಸಂವಹನ ನಡೆಸುವುದು ಬಹಳ ಮುಖ್ಯ. ಆನ್‌ಲೈನ್ ಪಾಠಗಳೊಂದಿಗೆ ನಾವು ಈ ಸಂಪ್ರದಾಯವನ್ನು ಸಂಪೂರ್ಣವಾಗಿ ಅಳಿಸಲು ಸಾಧ್ಯವಿಲ್ಲ ಎಂದು ಯುನೆಸ್ಕೋ ಹೇಳಿರುವುದಾಗಿ ವರದಿ ತಿಳಿಸಿದೆ.

Also Read  ಸತತ 2ನೇ ದಿನವೂ ಇಳಿಕೆಯಾದ ಚಿನ್ನದ ದರ ➤ ಆಭರಣ ಪ್ರಿಯರಲ್ಲಿ ಮತ್ತೆ ಮಂದಹಾಸ

error: Content is protected !!
Scroll to Top