ರಾತ್ರಿ ‘ಬ್ರಾ’ ಧರಿಸಿ ಮಲಗುವವರೇ ಎಚ್ಚರ..!

(ನ್ಯೂಸ್ ಕಡಬ) newskadaba.com ಜು. 26. ದಿನವಿಡೀ ಕೆಲಸ ಮಾಡುವ ಮಹಿಳೆಯರಿಗೆ ರಾತ್ರಿ ವೇಳೆ ವಿಶ್ರಾಂತಿ ಅತ್ಯಗತ್ಯ. ಮಹಿಳೆಯರು ಸರಿಯಾದ ಆಹಾರ-ನಿದ್ರೆ ಜೊತೆಗೆ ರಾತ್ರಿ ಮಲಗುವ ವೇಳೆ ಧರಿಸುವ ಬಟ್ಟೆಯ ಬಗ್ಗೆಯೂ ಗಮನ ನೀಡಬೇಕಾಗುತ್ತದೆ. ಅಲ್ಲದೇ ಮಹಿಳೆಯರು ಸೌಂದರ್ಯಕ್ಕೆ ಕೊಟ್ಟಷ್ಟು ಮಹತ್ವವನ್ನು ಆರೋಗ್ಯಕ್ಕೂ ನೀಡುವ ಅಗತ್ಯವಿದೆ.

ರಾತ್ರಿ ವೇಳೆಯಲ್ಲಿ ಸಡಿಲವಾದ ಬಟ್ಟೆ ಧರಿಸುವುದು ಅಗತ್ಯ. ಕೆಲ ಮಹಿಳೆಯರು ಇದನ್ನು ನಿರ್ಲಕ್ಷ್ಯಿಸುತ್ತಾರೆ. ರಾತ್ರಿ ಬ್ರಾ ಧರಿಸಿ ಮಲಗುತ್ತಾರೆ. ಆದ್ರೆ ಇದು ನಮ್ಮ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಎಂಬುದನ್ನು ನೀವು ಊಹಿಸಲೂ ಸಾಧ್ಯವಿಲ್ಲ.

ಸ್ತನ ಕ್ಯಾನ್ಸರ್ ಅಪಾಯ: ಕೆಲವು ಮಹಿಳೆಯರು ರಾತ್ರಿ ಬ್ರಾ ಧರಿಸಿ ಮಲಗುತ್ತಾರೆ. ಬ್ರಾ ಧರಿಸಿ ಮಲಗುವುದರಿಂದ ಯಾವುದೇ ಸಮಸ್ಯೆಯಿಲ್ಲ ಎನ್ನುವವರೂ ಇದ್ದಾರೆ. ಆದರೆ, ಬ್ರಾ ಧರಿಸಿ ಮಲಗುವುದ್ರಿಂದ ಸ್ತನ ಕ್ಯಾನ್ಸರ್ ಅಪಾಯ ಹೆಚ್ಚಿರುತ್ತದೆ ಎಂದು ಸಂಶೋಧನೆಯೊಂದು ಹೇಳಿದೆ.

ರಕ್ತದ ಹರಿವು : ರಾತ್ರಿ ಬ್ರಾ ಧರಿಸಿ ಮಲಗುವುದರಿಂದ ರಕ್ತ ಸಂಚಾರ ಸರಿಯಾಗುವುದಿಲ್ಲ. ಇದರಿಂದ ಅನೇಕ ಸಮಸ್ಯೆ ಕಾಡುತ್ತದೆ. ಕ್ಯಾನ್ಸರ್ ಕಾಡುವ ಅಪಾಯವೂ ಹೆಚ್ಚಿರುತ್ತದೆ.

ಚರ್ಮದ ಸಮಸ್ಯೆ: ರಾತ್ರಿ ಬ್ರಾ ಧರಿಸಿ ಮಲಗುವುದರಿಂದ ಗಾಳಿ ಸರಿಯಾಗಿ ಆಡುವುದಿಲ್ಲ. ಇದು ತುರಿಕೆಗೆ ಕಾರಣವಾಗುತ್ತದೆ. ಚರ್ಮ ಒಣಗಲು ಶುರುವಾಗುತ್ತದೆ. ಹಾಗಾಗಿ ಸರಿ ಸೈಜ್ ನ ಹಾಗೂ ಒಳ್ಳೆ ಬ್ರ್ಯಾಂಡ್ ನ ಬ್ರಾ ಧರಿಸಬೇಕು. ರಾತ್ರಿ ಬ್ರಾ ತೆಗೆದಿಟ್ಟು ಮಲಗಬೇಕು.

error: Content is protected !!

Join WhatsApp Group

WhatsApp Share