(ನ್ಯೂಸ್ ಕಡಬ) newskadaba.com ಕಡಬ, ಜ.31. ಪಿಜಕ್ಕಳ ಕಿರಿಯ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿಗಳು ಕೆಲವರು ಸೇರಿ ಮಾತಿನ ಮಂಟಪ(ಡಯಾಸ್) ವನ್ನು ಶಾಲೆಗೆ ಶನಿವಾರದಂದು ಕೊಡುಗೆಯಾಗಿ ನೀಡಿದ್ದಾರೆ.
ಪಿಜಕ್ಕಳ ಶಾಲೆಯ ಹಳೆಯ ವಿದ್ಯಾರ್ಥಿಗಳಾದ ನಿವೃತ್ತ ಸೈನಿಕ ಕಮಲಾಕ್ಷಿ ಅರುಣ್ ಕುಮಾರ್, ಬೆಳ್ತಂಗಡಿ ಕಾಯರ್ತಡ್ಕ ಶಾಲಾ ದೈಹಿಕ ಶಿಕ್ಷಕರಾದ ಪ್ರಕಾಶ್ ಎ.ಜೆ., ಆಲೂರು ಸರಕಾರಿ ಶಾಲಾ ದೈಹಿಕ ಶಿಕ್ಷಕರಾದ ವಸಂತಿ ತುಳಸಿ ಪ್ರಸಾದ್, ಬೆಂಗಳೂರು ರಾಮಯ್ಯ ಆಸ್ಪತ್ರೆಯ ಶುಶ್ರೂಷಕರಾದ ಉಷಾ ಜಯಪ್ರಕಾಶ್, ರಮ್ಯ ತಿರುಮಲೇಶ್ ನೆಟ್ಟಣ ಮೊದಲಾದವರು ಸೇರಿ ಡಯಾಸನ್ನು ಕೊಡುಗೆಯಾಗಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಪಿಜಕ್ಕಳ ಶಾಲಾಭಿವೃದ್ದಿ ಸಮಿತಿಯ ಪೂರ್ವಾಧ್ಯಕ್ಷರಾದ ದಯಾನಂದ ಗೌಡ ಪೊಯ್ಯತ್ತಡ್ಡ, ನಿವೃತ್ತ ಸೈನಿಕ ಅರುಣ್ ಕುಮಾರ್, ದೇವಕಿ ಜನಾದ೯ನ ಗೌಡ ಕಂಗುಳೆ, ಯತೀಂದ್ರ ಗೌಡ, ಶಿಕ್ಷಕಿ ಗಂಗಮ್ಮ, ನಳಿನಿ, ಹಾಗೂ ಶಾಲಾಭಿವೃದ್ದಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಚೇತನಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು, ಸಹಶಿಕ್ಷಕಿ ಕವಿತಾ ವಂದಿಸಿದರು.