ಸೌಂದರ್ಯ ಹಾಳು ಮಾಡುವ ಬಿರುಕು ತುಟಿ ಸಮಸ್ಯೆಗೆ ಇಲ್ಲಿದೆ ಪರಿಹಾರ

(ನ್ಯೂಸ್ ಕಡಬ)newskadaba.com ಜು.26. ಸಾಮಾನ್ಯವಾಗಿ ಎಲ್ಲ ಮಹಿಳೆಯರಿಗೆ ತಾನು ತುಂಬಾ ಚಂದದ ಡ್ರೆಸ್ ಹಾಕಿಕೊಳ್ಳಬೇಕು. ಅದಕ್ಕೆ ತಕ್ಕಂತ ಮೇಕಪ್, ಲಿಪ್ಸ್ಟಿಕ್ ಹಚ್ಚಬೇಕು ಅನ್ನೋ ಆಸೆ ಇದ್ದೇ ಇರುತ್ತೆ. ಆದರೆ ಮುಖದ ಸೌಂದರ್ಯವನ್ನ ಹೆಚ್ಚಿಸೋ ನಿಮ್ಮ ತುಟಿಗಳು ಆರೋಗ್ಯವಾಗಿಲ್ಲ ಅಂದರೆ ನೀವು ಅದೆಷ್ಟೇ ಮೇಕಪ್ ಮಾಡಿದ್ರೂ ವ್ಯರ್ಥ.


ನಯವಾದ ತುಟಿಗಳನ್ನ ಹೊಂದಬೇಕು ಅಂದರೆ ತುಟಿಗಳ ಆರೈಕೆ ಮಾಡೋದೂ ಕೂಡ ಅಷ್ಟೇ ಅವಶ್ಯಕ. ಇದಕ್ಕೆ ಜಾಸ್ತಿ ಕಷ್ಟ ಪಡಬೇಕಾದದ್ದು ಏನೂ ಇಲ್ಲ. ತುಟಿ ಒಣಗಿದ ಹಾಗೆ ಇದ್ದಂತೆಯೇ ನಾವು ನಾಲಗೆಯಿಂದ ನೆಕ್ಕಿಕೊಳ್ತೇವೆ. ಇದು ಆ ಕ್ಷಣಕ್ಕೆ ನಿಮ್ಮ ತುಟಿ ಸರಿಯಾಯ್ತು ಅಂತಾ ಅನಿಸುತ್ತೆ. ಆದರೆ ನಿಮ್ಮ ಈ ಅಭ್ಯಾಸ ತುಟಿ ಆರೋಗ್ಯಕ್ಕೆ ಹಾನಿಕಾರಕ. ಎಂಜಲಿನಲ್ಲಿರುವ ಎಂಜೈಮ್ಗಳು ನಿಮ್ಮ ತುಟಿಯನ್ನ ಮೇಲಿರುವ ರಕ್ಷಣಾ ಕವಚಕ್ಕೆ ಹಾನಿ ಮಾಡುವ ಸಾಧ್ಯತೆ ಇದೆ. ಆಹಾರ ಕ್ರಮ ಕೂಡ ನಿಮ್ಮ ತುಟಿಯ ಆರೋಗ್ಯವನ್ನ ಕಾಪಾಡಬಲ್ಲುದು. ವಿಟಮಿನ್ ಇ ಅಂಶ ಹೇರಳವಾಗಿರುವ ಪದಾರ್ಥಗಳು ತುಟಿಯ ಕಾಂತಿಯನ್ನ ಹೆಚ್ಚಿಸೋಕೆ ಕಾರಣವಾಗುತ್ತೆ. ಅತೀ ಉಪ್ಪು ಹಾಗೂ ಖಾರದ ಪದಾರ್ಥಗಳು ತುಟಿಯನ್ನ ಒಣಗಿಸಿ ಬಿಡುತ್ತೆ. ಅತಿಯಾಗಿ ನೀರು ಕುಡಿಯೋದ್ರಿಂದ ತುಟಿಯ ಸೌಂದರ್ಯ ಇಮ್ಮಡಿಯಾಗಲಿದೆ. ಮಲಗುವ ಮುನ್ನ ತುಟಿಗೆ ಲಿಪ್ಬಾಮ್ ಹಚ್ಚೋದನ್ನ ಮರೆಯದಿರಿ. ಬೆಳಗ್ಗೆ ಎದ್ದೊಡನೆಯೇ ಹತ್ತಿ ಇಲ್ಲವೇ ಮೃದುವಾದ ಬಟ್ಟೆ ಉಪಯೋಗಿಸಿ ತುಟಿಯ ಮೇಲೆ ಮಸಾಜ್ ಮಾಡಿ. ಇದು ನಿಮ್ಮ ತುಟಿಯಲ್ಲಿ ರಕ್ತದ ಹರಿವನ್ನ ಹೆಚ್ಚಿಸೋದ್ರ ಜೊತೆಗೆ ತುಟಿ ಇನ್ನಷ್ಟು ಮೃದು ಆಗೋಕೆ ಸಹಾಯಕಾರಿ.

Also Read  ಬಂಟ್ವಾಳ: KSRTC ಬಸ್ ಮತ್ತು ಬೈಕ್ ಢಿಕ್ಕಿ ➤ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು


ನೀವು ಯಾವ ಅಲಂಕಾರಿಕ ವಸ್ತುವನ್ನ ಬಳಸ್ತೀರಾ ಅನ್ನೋದು ಕೂಡ ನಿಮ್ಮ ತುಟಿಯ ಆರೋಗ್ಯವನ್ನ ನಿರ್ಧಾರ ಮಾಡುತ್ತೆ. ಹೀಗಾಗಿ ಯಾವ ಲಿಪ್ ಬಾಮ್ಗಳಲ್ಲಿ ವಿಟಮಿನ್ ಇ, ಆಲ್ಮಂಡ್ ಅಥವಾ ತೆಂಗಿನೆಣ್ಣೆ ,ಪೆಟ್ರೋಲಿಯಂ ಜೆಲ್ಲಿ ಹೇರಳವಾಗಿರುತ್ತದೆಯೋ ಅಂತಹ ಬಾಮ್ಗಳನ್ನೇ ಬಳಕೆ ಮಾಡಿ. ಲಿಪ್ಬಾಮ್ನ ಬೆಲೆ ಹೆಚ್ಚಿದಂತೆ ಅದು ಚರ್ಮಕ್ಕೆ ಒಳ್ಳೆಯದು ಅನ್ನೋ ವಿಚಾರವನ್ನ ಮೊದಲು ತಲೆಯಿಂದ ತೆಗೆದು ಹಾಕಿ. ಕೆಲವೊಮ್ಮೆ ಕಡಿಮೆ ಬೆಲೆಯ ಲಿಪ್ಬಾಮ್ಗಳೇ ನಿಮ್ಮ ಚರ್ಮದ ಆರೋಗ್ಯಕ್ಕೆ ಹಿತವಾಗಿರಬಹುದು. ಎಲ್ಲಕ್ಕಿಂತ ಮುಖ್ಯವಾಗಿ ನಿತ್ಯ ಮಲಗುವ ಮುನ್ನ ಮೇಕಪ್ ರಿಮೂವ್ ಮಾಡೋದನ್ನ ಮರೆಯದಿರಿ. ಕಾಟನ್ ಗೆ ಸ್ವಲ್ಪ ತೆಂಗಿನೆಣ್ಣೆ ತಾಗಿಸಿ ಅದರಿಂದ ಮೃದುವಾಗಿ ತುಟಿಗಳ ಮೇಲೆ ಮಸಾಜ್ ಮಾಡುತ್ತಾ ಲಿಪ್ಸ್ಟಿಕ್ಗಳನ್ನ ತೆಗೆಯಿರಿ. ಯಾವುದೇ ಕಾರಣಕ್ಕೂ ತುಟಿಗಳ ಮೇಲೆ ಗಟ್ಟಿಯಾಗಿ ಉಜ್ಜಬೇಡಿ.

Also Read  ಕುಟುಂಬದಲ್ಲಿ ನೆಮ್ಮದಿ ಇರಬೇಕೆ? ಹೀಗೆ ಮಾಡಿ

error: Content is protected !!
Scroll to Top