ಸಿಮೆಂಟ್ ಸಾಗಾಟದ ಲಾರಿ ನಿಯಂತ್ರಣ ತಪ್ಪಿ ಪಲ್ಟಿ – ಚಾಲಕ ಅಪಾಯದಿಂದ ಪಾರು



(ನ್ಯೂಸ್ ಕಡಬ)newskadaba.com ವಿಟ್ಲ, ಜು.26. ನಾಯಿಯ ಜೀವ ಉಳಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಸಾಗಾಟದ ಲಾರಿ ರಸ್ತೆಯಲ್ಲಿ ಉರುಳಿದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಕೆಲಿಂಜ ಕೊಟ್ಟಾರಿ ಕಟ್ಟೆ ಎಂಬಲ್ಲಿ ಸಂಭವಿಸಿದೆ.






ಲಾರಿಯೊಳಗಡೆ ಸಿಲುಕಿದ್ದ ಚಾಲಕನನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿದೆ. ಕಲ್ಲಡ್ಕದಿಂದ ಪೆರ್ಲ ಕಡೆ ಸಿಮೆಂಟ್ ಸಾಗಾಟದ ಲಾರಿ ನಾಯಿಯೊಂದಕ್ಕೆ ಢಿಕ್ಕಿ ಯಾಗುವುದನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಪಲ್ಟಿಯಾಗಿತ್ತು. ಘಟನಾ ಸ್ಥಳಕ್ಕೆ ಆಗಮಿಸಿದ ವಿಟ್ಲ ಠಾಣಾ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ ಎಂದು ವರದಿ ತಿಳಿಸಿದೆ.






error: Content is protected !!
Scroll to Top