(ನ್ಯೂಸ್ ಕಡಬ) newskadaba.com ಆರೋಗ್ಯ ಮಾಹಿತಿ, ಜು. 25. ಸಾಮಾನ್ಯವಾಗಿ ಮಹಿಳೆಯರಲ್ಲಿ ಕಂಡು ಬರುವ ಬಿಳಿ ಮುಟ್ಟು ಅಥವಾ ಬಿಳಿ ಸೆರಗು ಸಮಸ್ಯೆ ಕಂಡು ಬರುತ್ತದೆ. ಹಾಗಂತ ಚಿಕಿತ್ಸೆ ಮಾಡದೇ ಅದನ್ನು ನೀರ್ಲಕ್ಷಿಸಿದರೇ ಜೀವಕ್ಕೆ ಅಪಾಯವನ್ನು ತಂದಿಡಬಹುದು.
ಬಿಳಿಸೆರಗು ಸಾಮಾನ್ಯವಾಗಿ ಪೀರಿಯೆಡ್ ಹತ್ತಿರವಿದ್ದಾಗ ಅಥವಾ ಮುಗಿದ ಕೊನೆಯ ದಿನಗಳ ಬಳಿಕ ಆರಂಭವಾಗುತ್ತದೆ. ಆದರೆ ಇದು ಸಣ್ಣ ಸಮಸ್ಯೆ ಎಂದು ಹಲವರು ಕಡೆಗಣಿಸುತ್ತಾರೆ. ಬಿಳಿ ಮುಟ್ಟು ಹೆಚ್ಚಾದರೆ ಬೆನ್ನು ನೋವು ಹಾಗೂ ಸೋಂಟ ನೋವು ಕಾಣಿಸಿಕೊಳ್ಳುತ್ತದೆ. ಅನೀಮಿಯಾ ಅಥವಾ ರಕ್ತಹೀನತೆಯಿಂದ ಸಮಸ್ಯೆಯಿಂದ ಬಳಲುತ್ತಿರುವವರಲ್ಲಿ ಬಿಳಿ ಸೆರಗು ಹೆಚ್ಚು ಆಗುತ್ತದೆ. ಸಾಮಾನ್ಯ ಮಹಿಳೆ ಮಾತ್ರವಲ್ಲದೇ ಗರ್ಭಿಣಿಯರಲ್ಲಿಯೂ ಕಾಣಿಸಿಕೊಳ್ಳುತ್ತದೆ. ಮಹಿಳೆಯರು ಯೋನಿಯ ಬಗ್ಗೆ ಜಾಗೃತಿ ವಹಿಸದಿದ್ದರೆ ಈ ಸೋಂಕು ಹೆಚ್ಚುತ್ತದೆ.
ಬಿಳಿ ಮುಟ್ಟಿಗೆ ಪರಿಹಾರ
ದಿನಕ್ಕೆ 3-4 ಲೀಟರ್ ನೀರು ಕುಡಿಯುವುದರಿಂದ ಈ ಸಮಸ್ಯೆಯನ್ನು ಹತೋಟಿಯಲ್ಲಿಡಬಹುದು.
ಕೊತ್ತಂಬರಿ ಬೀಜವನ್ನು ರಾತ್ರಿ ವೇಳೆ ನೆನೆಹಾಕಿ ಸೇವಿಸುವುದರಿಂದ ಬಿಳಿ ಸೆರಗು ಹತೋಟಿಗೆ ಬರುತ್ತದೆ.
ದಾಳಿಂಬೆ ಹಣ್ಣಿನಲ್ಲಿ ಅಧಿಕ ಪೋಷಕಾಂಶ ಇರುವುದರಿಂದ ಅದನ್ನು ಸೇವಿಸಿದಲ್ಲಿ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಿ ಈ ತೊಂದರೆಯಿಂದ ಪಾರು ಮಾಡುತ್ತದೆ.