ಬಾರ್ ನಲ್ಲಿ ತಂಡದಿಂದ ವ್ಯಕ್ತಿಗೆ ಹಲ್ಲೆ – ಪ್ರಕರಣ ದಾಖಲು

Crime

(ನ್ಯೂಸ್ ಕಡಬ) newskadaba.com ವಿಟ್ಲ, ಜು. 23. ಊಟ ಮಾಡಲು ಬಾರೊಂದದಕ್ಕೆ ತೆರಳಿದ್ದ ಮೂವರ ಮೇಲೆ ತಂಡವೊಂದು ಹಲ್ಲೆ ನಡೆಸಿದ ಘಟನೆ ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದಲ್ಲಿರುವ ಬಾರೊಂದರಲ್ಲಿ ನಡೆದಿದೆ.


ಹಲ್ಲೆಗೊಳಗಾದವರನ್ನು ಬಂಟ್ವಾಳ ತಾಲೂಕು ಕೇಪುಗ್ರಾಮದ ಬಡಕೋಡಿ ನಿವಾಸಿ ವಿಶ್ವನಾಥ ರವರ ಪುತ್ರ ಸುರೇಶ್ ಎಂದು ಗುರುತಿಸಲಾಗಿದೆ. ನಿಶಾಂತ್ ಶೆಟ್ಟಿ, ರಾಕೇಶ್‌, ಚೇತು ಯಾನೆ ಚೇತನ್‌ ಪ್ರಕರಣದ ಆರೋಪಿಗಳಾಗಿದ್ದಾರೆ.

ಘಟನೆಯ ಕುರಿತಂತೆ ಸುರೇಶ್, ನಾನು ಗಣೇಶ್ ಮತ್ತು ವಿಟ್ಲದ ಸುರೇಶ್ ಅವರೊಂದಿಗೆ ಜು. 21 ರಂದು ರಾತ್ರಿ ವಿಟ್ಲ ಕಸಬಾ ಗ್ರಾಮದ, ಬಾರೊಂದಕ್ಕೆ ಊಟಕ್ಕೆಂದು ತೆರಳಿ ಅಲ್ಲಿ ಮಾತನಾಡುತ್ತಿದ್ದ‌ ಸಂದರ್ಭ ಆರೋಪಿ ನಿಶಾಂತ್ ಶೆಟ್ಟಿ ಎಂಬಾತ ನನ್ನ ಮೇಲಿನ ಯಾವುದೋ ಹಳೆಯ ದ್ವೇಷದಿಂದ ಅವಾಚ್ಯ ಶಬ್ದಗಳಿಂದ ಬೈದು ತಂಡದೊಂದಿಗೆ ಸೇರಿಕೊಂಡು ಹಲ್ಲೆ ನಡೆಸಿದ್ದಾರೆ. ಈ ವೇಳೆ ತಡೆಯಲು ಬಂದ ನನ್ನ ಸ್ನೇಹಿತರ ಮೇಲೂ ತಂಡ ಹಲ್ಲೆ ನಡೆಸಿದೆ.

Also Read  ಧರ್ಮಸ್ಥಳ ಯೋಜನೆ ವತಿಯಿಂದ ವೀಲ್ಹ್ ಚಯರ್ ವಿತರಣೆ

ಬಳಿಕ ಬಾರ್ ನ ಸಿಬ್ಬಂದಿಗಳು ಬಂದು ತಡೆದಾಗ ತಂಡ ನನಗೆ ಬೆದರಿಕೆ ಒಡ್ಡಿ ಪರಾರಿಯಾಗಿದೆ‌. ಘಟನೆಯಿಂದ ಗಾಯಗೊಂಡಿದ್ದ ನನ್ನನ್ನು ಸ್ನೇಹಿತರು ಪುತ್ತೂರು ಆಸ್ಪತ್ರೆಗೆ ಕರೆತಂದು ಬಳಿಕ ಹೆಚ್ಚಿನ ಮಾಹಿತಿಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎಂದು ಗಣೇಶ್ ರವರು ವಿಟ್ಲ ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

error: Content is protected !!
Scroll to Top