(ನ್ಯೂಸ್ ಕಡಬ)newskadaba.Com ಜು.22. ಈ ಅದ್ಭುತ ಮಾನ್ಸೂನ್ ಸಮಯಗಳಲ್ಲಿ ಕುಟುಂಬ ಮತ್ತು ಸ್ನೇಹಿತರೊಂದಿಗೆ ಆನಂದಿಸಬಹುದಾದ ಪಾಲಕ್ ಪಕೋಡಗಳನ್ನು ಮನೆಯಲ್ಲಿ ತಯಾರಿಸುವ ಸುಲಭ ಮತ್ತು ಸರಳ ಪಾಕವಿಧಾನಗಳ ಬಗ್ಗೆ ಇಲ್ಲಿದೆ ಮಾಹಿತಿ. ಪಾಲಕ್ ತಿನ್ನುವುದರಿಂದ ದೇಹಕ್ಕೆ ಅನೇಕ ಆರೋಗ್ಯ ಪ್ರಯೋಜನಗಳಿವೆ. ಅವು ಹಸಿರಸಿರಾಗಿ ಒಳ್ಳೆಯ ಗುಣಗಳಿಂದ ತುಂಬಿರುತ್ತವೆ ಮತ್ತು ದೇಹದಲ್ಲಿ ನೀರಿನ ಪ್ರಮಾಣವನ್ನು ಹೆಚ್ಚಿಸಲು ಹೆಸರುವಾಸಿಯಾಗಿದೆ.
ಬೇಕಾಗುವ ಸಾಮಗ್ರಿಗಳು:
-10-12 ಪಾಲಕ್ ಎಲೆಗಳು
-1 ಕಪ್ ಕಡಲೆ ಹಿಟ್ಟು
-1/4 ಟೀ ಸ್ಪೂನ್ ಕ್ಯಾರಮ್ ಬೀಜಗಳು (ಅಜ್ವೈನ್)
-1/4 ಟೀ ಸ್ಪೂನ್ ಅರಿಶಿನ ಪುಡಿ
-1/4 ಟೀ ಸ್ಪೂನ್ ಕೆಂಪು ಮೆಣಸಿನ ಪುಡಿ(ಖಾರ ಪುಡಿ)
-1/4 ಟೀ ಸ್ಪೂನ್ ಇಂಗು (ಅಸಾಫೋಟಿಡಾ )
-ರುಚಿಗೆ ತಕ್ಕಷ್ಟು ಉಪ್ಪು
-ಡೀಪ್ ಫ್ರೈ ಮಾಡಲು ಎಣ್ಣೆ
-ಬಡಿಸಲು ಖರ್ಜೂರ ಅಥವಾ ಹುಣಸೆ ಚಟ್ನಿ (ನಿಮಗೆ ಬೇಕಾದ ರೀತಿಯಲ್ಲಿ ಮಾಡಿಕೊಳ್ಳಬಹುದು)
ಮಾಡುವ ವಿಧಾನ:
ಒಂದು ದೊಡ್ಡ ಬಟ್ಟಲಿನಲ್ಲಿ ಅಂದರೆ ಕಲಸಿಕೊಳ್ಳಲು ಅನುಕೂಲವಾಗುವಂತ ಪಾತ್ರೆಯಲ್ಲಿ ಕಡಲೆ ಹಿಟ್ಟನ್ನು ತೆಗೆದುಕೊಂಡು, ಅದಕ್ಕೆ ಕ್ಯಾರಂ ಬೀಜಗಳು (ಅಜ್ವೈನ್), ಅರಿಶಿನ ಪುಡಿ, ಕೆಂಪು ಮೆಣಸಿನ ಪುಡಿ, ಸಾಸಿವೆ, ಸಾಕಷ್ಟು ಪ್ರಮಾಣದಲ್ಲಿ ಉಪ್ಪನ್ನು ಸೇರಿಸಿ, ನಿಧಾನವಾಗಿ ನೀರನ್ನು ಕೂಡ ಸೇರಿಸಿಕೊಳ್ಳಿ (ಎಷ್ಟು ಬೇಕೋ ಅಷ್ಟೇ ಪ್ರಮಾಣದಲ್ಲಿ ನೀರು ಬೆರಸಿ) ನಯವಾದ ಹಿಟ್ಟನ್ನು ತಯಾರಿ ಮಾಡಲು ಎಲ್ಲವನ್ನೂ ಒಟ್ಟಿಗೆ ಬೆರೆಸಬೇಕು. ಇನ್ನೊಂದು ಕಡಾಯಿ ತೆಗೆದುಕೊಂಡು ಎಣ್ಣೆಯನ್ನು ಬಿಸಿ ಮಾಡಿ. ಬಳಿಕ ಕಡಲೆ ಹಿಟ್ಟಿನ ಮಿಶ್ರಣದಲ್ಲಿ ಪ್ರತಿ ಪಾಲಕ್ ಎಲೆಗಳನ್ನು ಹಿಟ್ಟಿನಲ್ಲಿ ಮುಳುಗಿಸಿ ನಂತರ ಗರಿಗರಿಯಾಗಿ ಕಂದು ಬಣ್ಣ ಬರುವವರೆಗೆ ಎಣ್ಣೆಯಲ್ಲಿ ಕರಿಯಬೇಕು. ಇದನ್ನು ಬಳಿಕ, ಚಟ್ನಿ ಅಥವಾ ಖರ್ಜೂರ ಮತ್ತು ಹುಣಸೆ ಚಟ್ನಿಯೊಂದಿಗೆ ಬಡಿಸಬೇಕು. ತಿನ್ನಲೂ, ಆರೋಗ್ಯಕ್ಕೂ ಉತ್ತಮ ತಿಂಡಿಯಾಗಿದೆ.