ಬಂಟ್ವಾಳ: ಮನೆಮೇಲೆ ಮಗುಚಿಬಿದ್ದ ಲಾರಿ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜು. 22. ನಿಯಂತ್ರಣ ತಪ್ಪಿದ ಲಾರಿಯೊಂದು ಮನೆಮೇಲೆ ಬಿದ್ದ ಘಟನೆ ತಾಲೂಕಿನ ವಗ್ಗ ಸಮೀಪದ ಬಾಂಬಿಲ ಎಂಬಲ್ಲಿ ನಡೆದಿದೆ.

ಭಜರಂಗಿ ರೋಡ್ ಲೈನ್ಸ್ ಸಂಸ್ಥೆಗೆ ಸೇರಿದ ಲಾರಿ, ಮಂಗಳೂರಿನಿಂದ ಧರ್ಮಸ್ಥಳದ ಕಡೆಗೆ ತೆರಳುತ್ತಿದ್ದ ವೇಳೆ, ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದಿದೆ. ಪರಿಣಾಮ ಲಾರಿಯಲ್ಲಿದ್ದ ಕೆಂಪು ಇಟ್ಟಿಗೆ ಕೆಳಕ್ಕೆ ಬಿದ್ದು ಚೆಲ್ಲಾಪಿಲ್ಲಿಯಾಗಿದೆ. ರಸ್ತೆ ಬದಿ ರಾಷ್ಟ್ರೀಯ ಹೆದ್ದಾರಿಯವರು ಹಾಕಿದ್ದ ತಡೆ ಬೇಲಿ ಮುರಿದು ಮನೆಯ ಶೆಡ್ ಮೇಲೆ ಲಾರಿ ಮಗುಚಿ ಬಿದ್ದಿದೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

Also Read  ಕ್ಯಾನ್ಸರ್‌ ಬಾಧಿತ ಮಹಿಳೆಗೆ ಉಚಿತ ಆಯಂಬುಲೆನ್ಸ್‌ ಸೇವೆ ➤ ಅಭಿಲಾಷ್‌ ಅವರು ಮಾನವೀಯ ನಡೆಗೆ ಶ್ಲಾಘನೆ

error: Content is protected !!