ಎಸ್‌ವೈಎಸ್ ಮಾಣಿ ಸರ್ಕಲ್ ವತಿಯಿಂದ C-ಮೀಟ್ 2k23 ಕ್ಯಾಂಪ್ – ಪರಸ್ಪರ ಕೈಜೋಡಿಸಿ ಕಾರ್ಯಾಚರಿಸಿರಿ ಪರಾಜಯ ಹೊಂದಲಾರಿರಿ- ಬಹು| ಅಬ್ದುಲ್ ಅಝೀಝ್ ಮಿಸ್ಬಾಹಿ

(ನ್ಯೂಸ್ ಕಡಬ) newskadaba.com ಮಾಣಿ, ಜು. 21. ಸಂಘಟನಾ ಚಟುವಟಿಕೆಗಳನ್ನು ಬಲಿಷ್ಠಗೊಳಿಸಲು ಪರಸ್ಪರ ಕೈಜೋಡಿಸಿ ಕಾರ್ಯಾಚರಿಸಿರಿ. ನೀವು ಎಂದಿಗೂ ಪರಾಜಯ ಹೊಂದಲಾರಿರಿ ಎಂದು ಎಸ್‌ವೈಎಸ್ ದಕ ಈಸ್ಟ್ ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ಮಿಸ್ಬಾಹಿ ಹೇಳಿದರು.

ಅವರು ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ(ರಿ.) ಎಸ್‌ವೈಎಸ್ ಮಾಣಿ ಸರ್ಕಲ್ ವತಿಯಿಂದ ನಡೆದ C-ಮೀಟ್ 2k23 ಎಂಬ ಕ್ಯಾಂಪ್‌ನ ಆಧ್ಯಾತ್ಮಿಕ ತರಗತಿಯಲ್ಲಿ ಮಾತನಾಡಿದರು. ಎಸ್‌ವೈಎಸ್ ಪುತ್ತೂರು ಝೋನ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಸಖಾಫಿ ಅಲ್ ಹಿಕಮಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಹೈದರ್ ಸಖಾಫಿ ಶೇರಾ ಅಧ್ಯಕ್ಷೀಯ ಮಾತುಗಳನ್ನಾಡಿದರು. ಎಸ್‌ವೈಎಸ್ ದಕ ಈಸ್ಟ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಬ್ದುಲ್ ಹಮೀದ್ ಕೊಯ್ಲ ಕಡತಗಳ ನಿರ್ವಹಣೆಯ ಬಗ್ಗೆ ತರಗತಿ ನಡೆಸಿಕೊಟ್ಟರು, ಎಸ್‌ವೈಎಸ್ ದಕ ಈಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ವಾಲಿಹ್ ಮುರ ಸರ್ಕಲ್ ಮತ್ತು ಯೂನಿಟ್ ಅವಲೋಕನ ನಡೆಸಿದರು. ಎಸ್‌ವೈಎಸ್ ಮಾಣಿ ಸರ್ಕಲ್ ಉಸ್ತುವಾರಿ ಸಿದ್ದೀಕ್ ಹಾಜಿ ಕಬಕ ಮತ್ತು ಕರ್ನಾಟಕ ಮುಸ್ಲಿಂ ಜಮಾ‌ಅತ್ ಮಾಣಿ ಸರ್ಕಲ್ ಪ್ರಧಾನ ಕಾರ್ಯದರ್ಶಿ ಹಾಜಿ ಯೂಸುಫ್ ಸಯೀದ್ ನೇರಳಕಟ್ಟೆ ಶುಭಹಾರೈಸಿದರು. ಸೂರಿಕುಮೇರು, ಶೇರಾ, ಬುಡೋಳಿ, ನೇರಳಕಟ್ಟೆ, ಮಿತ್ತೂರು, ಸೂರ್ಯ, ಪಾಟ್ರಕೋಡಿ ಯೂನಿಟ್ ಗಳ ಕ್ಯಾಬಿನೆಟ್‌ಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಎಸ್‌ವೈಎಸ್ ಮಾಣಿ ಸರ್ಕಲ್ ಪ್ರಧಾನ ಕಾರ್ಯದರ್ಶಿ ಸಲೀಂ ಮಾಣಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Also Read  ದ್ವಿತೀಯ ಪಿಯುಸಿಯಲ್ಲಿ ಸಾಧನೆಗೈದ ಕಡಬ ಸೈಂಟ್ ಜೋಕಿಮ್ಸ್ ವಿದ್ಯಾರ್ಥಿಗಳು ➤ ಕಾಲೇಜು ಆಡಳಿತ ಮಂಡಳಿಯಿಂದ ಅಭಿನಂದನೆ

error: Content is protected !!
Scroll to Top