‘INDIA’ ಒಕ್ಕೂಟಕ್ಕೆ ‘ಜೀತೇಗ ಭಾರತ್’ ಟ್ಯಾಗ್ ಲೈನ್ ಘೋಷಣೆ- ವಿರೋಧ ಪಕ್ಷಗಳ ಮಹಾಮೈತ್ರಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 19. ಮಹಾಮೈತ್ರಿ ಕೂಟದ ಸಭೆಯಲ್ಲಿ ವಿರೋಧ ಪಕ್ಷಗಳ ನಾಯಕರು ತಮ್ಮ ಒಕ್ಕೂಟಕ್ಕೆ INDIA ಎಂದು ನಾಮಕರಣ ಮಾಡಿದ ಬೆನ್ನಲ್ಲೇ ಇದೀಗ ‘ಜೀತೇಗ ಭಾರತ್’ ಎನ್ನುವ ಟ್ಯಾಗ್‌ಲೈನ್ ಘೋಷಣೆ ಮಾಡಿದ್ದಾರೆ.

ಮಂಗಳವಾರದಂದು ಬೆಂಗಳೂರಿನಲ್ಲಿ ವಿರೋಧ ಪಕ್ಷಗಳ ಮಹಾಮೈತ್ರಿಕೂಟ ನಡೆದಿತ್ತು. ಈ ಸಭೆಯಲ್ಲಿ ವಿರೋಧ ಪಕ್ಷದ ನಾಯಕರು ತಮ್ಮ ಒಕ್ಕೂಟಕ್ಕೆ INDIA ಎಂದು ನಾಮಕರಣ ಮಾಡಿದ್ದು, 2024ರ ಚುನಾವಣೆಯು ಬಿಜೆಪಿಯ ಸಿದ್ಧಾಂತ ಮತ್ತು ಅವರ ಚಿಂತನೆಯ ವಿರುದ್ಧ ಹೋರಾಟವಾಗಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಇನ್ನು INDIA ಎಂದು ನಾಮಕರಣ ಮಾಡಿದ ಬೆನ್ನಲ್ಲೇ ಇದೀಗ ‘ಜೀತೇಗ ಭಾರತ್’ ಎನ್ನುವ ಟ್ಯಾಗ್‌ಲೈನ್ ಘೋಷಣೆ ಮಾಡಿರುವುದಾಗಿ ವರದಿ ತಿಳಿಸಿದೆ.

Also Read  ಕಡಬ: ವಿವಿಧ ಶಾಲಾ- ಕಾಲೇಜುಗಳಲ್ಲಿ ಮಾದಕ ವಸ್ತು ತಡೆ ಹಾಗೂ ಜಾಗೃತಿ ಅಭಿಯಾನ

ಕಾಂಗ್ರೆಸ್ ನ INDIA ನಾಮಕರಣಕ್ಕೆ ತಿರುಗೇಟು ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ ಎನ್‌ಡಿಎಯಲ್ಲಿ (NDA), ‘N’ ಎಂದರೆ ನವ ಭಾರತ, ‘D’ ಎಂದರೆ ಅಭಿವೃದ್ಧಿ ಹೊಂದಿದ ರಾಷ್ಟ್ರ, ‘A’ ಎಂದರೆ ಜನರು ಮತ್ತು ಪ್ರದೇಶಗಳ ಆಕಾಂಕ್ಷೆಗಳು ಎಂದು ಹೇಳಿದ್ದಾರೆ.

error: Content is protected !!
Scroll to Top