ಕರಾಚಿಯಲ್ಲಿ 150 ವರ್ಷ ಹಳೆಯ ಮಾರಿ ಮಾತಾ ಹಿಂದೂ ದೇವಸ್ಥಾನ ಧ್ವಂಸ

(ನ್ಯೂಸ್ ಕಡಬ)newskadaba.com ಪಾಕಿಸ್ತಾನ, ಜು.18. 150 ವರ್ಷಗಳಷ್ಟು ಹಳೆಯದಾದ ಮಾರಿ ಮಾತಾ ಹಿಂದೂ ದೇವಾಸ್ಥಾನವನ್ನು ಕರಾಚಿಯಲ್ಲಿ ನೆಲಸಮಗೊಳಿಸಲಾಗಿದೆ ಎಂದು ತಿಳಿದುಬಂದಿದೆ.


ಈ ಪ್ರದೇಶದಲ್ಲಿ ವಿದ್ಯುತ್ ಸ್ಥಗಿತಗೊಳ್ಳುತ್ತಿದ್ದಂತೆ ಬುಲ್ಡೋಜರ್ ಬಂದು ನಿಂತಿದ್ದು, ನೋಡನೋಡುತ್ತಿದ್ದಂತೆ ದೇವಾಸ್ಥಾನವನ್ನು ಧ್ವಂಸಗೊಳಿಸಲಾಗಿದೆ.
ಇನ್ನು 150 ವರ್ಷಗಳ ಹಿಂದೆ ದೇವಾಸ್ಥಾನವನ್ನು ನಿರ್ಮಿಸಲಾಗಿದ್ದು ಇದರ ಅಂಗಳದಲ್ಲಿ ನಿಧಿ ಹೂತಿಡಲಾಗಿದ್ದು, ಆಕ್ರಮಣಕಾರರು ಬಹಳ ದಿನಗಳಿಂದ ಇದರ ಮೇಲೆ ಕಣ್ಣಿಟ್ಟಿದ್ದರು ಎಂದು ವರದಿಯಾಗಿದೆ.

error: Content is protected !!
Scroll to Top