ಮಗನ ಕಾಲೇಜು ಶುಲ್ಕದ ಆಸೆಗಾಗಿ ಪ್ರಾಣಬಿಟ್ಟ ತಾಯಿ !

(ನ್ಯೂಸ್ ಕಡಬ)newskadaba.com ಚೆನ್ನೈ, ಜು.18. ತಾನು ಸತ್ತರೆ ಮಗನ ಕಾಲೇಜು ಶುಲ್ಕವನ್ನು ಸರ್ಕಾರ ಭರಿಸುತ್ತದೆ ಎಂದು ಮಹಿಳೆಯೊಬ್ಬರು ಚಲಿಸುತ್ತಿರುವ ಬಸ್ಸಿನ ಮುಂದೆ ಹಾರಿ ಮೃತಪಟ್ಟಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.


ಮೃತ ಮಹಿಳೆಯನ್ನು ಪಾಪತಿ(45) ಎಂದು ಗುರುತಿಸಲಾಗಿದೆ. ಮಹಿಳೆಯು ಕಳೆದ 15 ವರ್ಷದಿಂದ ಗಂಡನಿಂದ ದೂರವಾಗಿ ಕಷ್ಟಪಟ್ಟು ಮಗನನ್ನು ಸಾಕಿ ಬೆಳೆಸಿದ್ದು, ಸೇಲಂನ ಕಲೆಕ್ಟರ್ ಕಛೇರಿಯಲ್ಲಿ ಕಳೆದ ಕೆಲ ಸಮಯದಿಂದ ಸ್ವಚ್ಛತೆಯ ಕೆಲಸವನ್ನು ಮಾಡುತ್ತಿದ್ದರು. ಮಗನ ಕಾಲೇಜು ಶುಲ್ಕವನ್ನು ಪಾವತಿಸಲು ಸಾಧ್ಯವಾಗದ ಕಾರಣ ಪಾಪತಿ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಈ ವೇಳೆ ಯಾರೋ ಒಬ್ಬರು ಪಾಪತಿಯ ಬಳಿ ನೀನು ಅಪಘಾತದಲ್ಲಿ ಸತ್ತರೆ ನಿನ್ನ ಮಗನ ಕಾಲೇಜು ಶುಲ್ಕದೊಂದಿಗೆ, ಆತನ ಭವಿಷ್ಯವನ್ನು ಸರ್ಕಾರ ನೋಡಿಕೊಳ್ಳುತ್ತದೆ ಎಂದಿದ್ದರೆಂದು ಪ್ರಕಟಣೆ ತಿಳಿಸಿದೆ.

Also Read  ವಿಳಾಸ ಕೇಳುವ ನೆಪದಲಿ ಮಹಿಳೆಯ ಸರ ಎಗರಿಸಿದ ಕಳ್ಳರು

error: Content is protected !!
Scroll to Top