ಭದ್ರತಾ ಪಡೆಯ ಕಾರ್ಯಾಚರಣೆ- ನಾಲ್ವರ ಎನ್ ಕೌಂಟರ್

(ನ್ಯೂಸ್ ಕಡಬ) newskadaba.com ಜಮ್ಮು/ಕಾಶ್ಮೀರ, ಜು. 18. ಭದ್ರತಾ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನಾಲ್ವರು ಭಯೋತ್ಪಾದಕರನ್ನು ಹೊಡೆದುರುಳಿಸಿದ ಕುರಿತು ಪೂಂಚ್‌ನ ಸಿಂಧ್ರಾ ಪ್ರದೇಶದಿಂದ ವರದಿಯಾಗಿದೆ.


ಭಾರತೀಯ ಸೇನಾಧಿಕಾರಿಯ ಪ್ರಕಾರ, ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಮಂಗಳವಾರ ಮುಂಜಾನೆ ಎನ್‌ಕೌಂಟರ್ ನಡೆಸಿ ನಾಲ್ವರು ಭಯೋತ್ಪಾದಕರನ್ನು ಹತ್ಯೆ ಮಾಡಿದೆ. ಕಾರ್ಯಾಚರಣೆಯಲ್ಲಿ ಭಾರತೀಯ ಸೇನೆಯ ವಿಶೇಷ ಪಡೆಗಳು, ರಾಷ್ಟ್ರೀಯ ರೈಫಲ್ಸ್ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಸಿಬ್ಬಂದಿ ಸೇರಿತ್ತು. ಈ ಕಾರ್ಯಾಚರಣೆಯಲ್ಲಿ ಹತರಾದ ಭಯೋತ್ಪಾದಕರು ವಿದೇಶಿ ಭಯೋತ್ಪಾದಕರಾಗಿದ್ದು, ಅವರ ಗುರುತು ಪತ್ತೆ ಹಚ್ಚಲಾಗುತ್ತಿದೆ.

Also Read  ಚಿಕ್ಕಬಳ್ಳಾಪುರ: ಶಂಕಿತ ಕೊರೋನ ಸೋಂಕಿನಿಂದ ವೃದ್ಧೆ ಮೃತ್ಯು

ಮೂಲಗಳ ಪ್ರಕಾರ, ಗಡಿ ನಿಯಂತ್ರಣ ರೇಖೆಯ ಆಚೆಯಿಂದ, ಐಎಸ್‌ಐ ಮತ್ತು ಭಯೋತ್ಪಾದಕ ಸಂಘಟನೆಗಳ ಮುಖಂಡರು ಭಯೋತ್ಪಾದಕರಿಗೆ ಒಳನುಸುಳಲು ಮತ್ತು ಸ್ವಾತಂತ್ರ್ಯ ದಿನಾಚರಣೆ ಮತ್ತು ರಕ್ಷಾ ಬಂಧನದ ಸಮಯದಲ್ಲಿ ಭಯೋತ್ಪಾದಕ ಕೃತ್ಯ ಎಸಗಲು ಪ್ರೇರಣೆ ನೀಡಿರಬಹುದು ಎಂಬ ಮಾಹಿತಿ ದೊರಕಿದೆ.

error: Content is protected !!
Scroll to Top