ಆರೋಗ್ಯ ತೀರಾ ಹದಗೆಟ್ಟ ಹಿನ್ನೆಲೆ- ನಾಸಿರ್ ಮಅದನಿ ಜಾಮೀನು ವಿಚಾರದಲ್ಲಿ ಸಡಿಲಿಕೆ

(ನ್ಯೂಸ್ ಕಡಬ) newskadaba.com ನವದೆಹಲಿ, ಜು. 17. ಬೆಂಗಳೂರು ಸ್ಫೋಟ ಪ್ರಕರಣದ ಆರೋಪ ಎದುರಿಸುತ್ತಿರುವ ಪಿಡಿಪಿ ಅಧ್ಯಕ್ಷ ಅಬ್ದುಲ್ ನಾಸಿರ್‌ ಮಅದನಿ ಅವರನ್ನು ಸೂಕ್ತ ಚಿಕಿತ್ಸೆಗಾಗಿ ಪೊಲೀಸರ ಬೆಂಗಾವಲು ಇಲ್ಲದೆ ಕೇರಳಕ್ಕೆ ತೆರಳಲು ಸುಪ್ರೀಂ ಕೋರ್ಟ್ ಸೋಮವಾರದಂದು ಅನುಮತಿ ನೀಡಿದೆ.

ಬೆಂಗಾವಲು ಇಲ್ಲದೇ ಕೇರಳಕ್ಕೆ ತೆರಳಲು ಮಅದನಿಗೆ ಸುಪ್ರೀಂ ಕೋರ್ಟ್ ಅವಕಾಶ ನೀಡಿದ್ದಲ್ಲದೇ, ವಿಚಾರಣೆ ಮುಗಿಯುವವರೆಗೆ ಬೆಂಗಳೂರಿನಲ್ಲಿಯೇ ಇರಬೇಕು ಎಂದಿದ್ದ ಷರತ್ತು ಕೂಡಾ ರದ್ದಾಗಿರುವ ಕುರಿತು ವರದಿಯಾಗಿದೆ. ಮೊದಲು ನಾಸಿರ್‌ ಮಅದನಿ ಅವರು ಕೊಲ್ಲಂ ಜಿಲ್ಲೆಯಲ್ಲಿಯೇ ಇರುವಂತೆ ಸೂಚಿಸಿದ್ದ ಕೋರ್ಟ್, ವಕೀಲರ ಮನವಿ ಹಿನ್ನೆಲೆ ಚಿಕಿತ್ಸೆಗಾಗಿ ಜಿಲ್ಲೆ ತೊರೆಯಲು ಅವಕಾಶ ನೀಡಿದೆ. ಪ್ರಯಾಣಕ್ಕೆ ಕೊಲ್ಲಂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಅನುಮತಿ ಪಡೆಯಬೇಕು ಎಂದು ನ್ಯಾಯಾಲಯ ಸೂಚಿಸಿದೆ.


ಮಅದನಿ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಕಪಿಲ್ ಸಿಬಲ್, ದಿನಕಳೆದಂತೆ ಮಅದನಿಯ ಆರೋಗ್ಯ ಸ್ಥಿತಿ ಹದಗೆಡುತ್ತಿದ್ದು, ಉತ್ತಮ ಚಿಕಿತ್ಸೆಯ ಅಗತ್ಯವಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಇನ್ನು ಮುಂದೆ ವಿಚಾರಣೆಗೆ ಮ-ಅದನಿ ಹಾಜರಿ ಅಗತ್ಯವಿಲ್ಲ ಎಂಬುದನ್ನು ಮನಗಂಡ ಸುಪ್ರೀಂ ಕೋರ್ಟ್ ಮಅದನಿಗೆ ಕೇರಳದಲ್ಲಿಯೇ ಇರುವಂತೆ ಸೂಚಿಸಿ, ಅಗತ್ಯಬಿದ್ದಲ್ಲಿ ಬೆಂಗಳೂರಿನ ವಿಚಾರಣಾ ನ್ಯಾಯಾಲಯಕ್ಕೆ ಹಾಜರಾಗುವಂತೆಯೂ ಹೇಳಿದೆ.

error: Content is protected !!

Join the Group

Join WhatsApp Group