ಟೆಸ್ಟ್ ಕ್ರಿಕೆಟ್ ನಲ್ಲಿ ಗರಿಷ್ಠ ರನ್ ಗಳ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಭಡ್ತಿ ಪಡೆದ ಕೊಹ್ಲಿ

(ನ್ಯೂಸ್ ಕಡಬ) newskadaba.com ಡೊಮಿನಿಕಾ, ಜು. 15. ಇತಿಹಾಸದಲ್ಲಿ ಶ್ರೇಷ್ಠ ಬ್ಯಾಟರ್ ಗಳಲ್ಲಿ ಒಬ್ಬರಾದ ವಿರಾಟ್ ಕೊಹ್ಲಿ ತನ್ನ ವೃತ್ತಿಜೀವನದಲ್ಲಿ ಮತ್ತೊಂದು ಮೈಲಿಗಲ್ಲನ್ನು ಸ್ಥಾಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ನ ವಿರುದ್ಧದ ಮೊದಲ ಟೆಸ್ಟ್ ನ 2ನೇ ದಿನವಾದ ಗುರುವಾರದಂದು ಈ ಸಾಧನೆ ಮಾಡಿದರು. ಅಜೇಯ 36 ರನ್ ಗಳಿಸಿದ ಕೊಹ್ಲಿ, ತಕ್ಷಣವೇ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅಗ್ರ 5 ಟೆಸ್ಟ್ ಬ್ಯಾಟರ್ ಆಗಿ ಭಡ್ತಿ ಪಡೆದರು. ಈ ವೇಳೆ ಅವರು ಕ್ರಿಕೆಟಿನ ಅತ್ಯುತ್ತಮ ಆರಂಭಿಕರಲ್ಲಿ ಓರ್ವರಾದ ವೀರೇಂದ್ರ ಸೆಹ್ವಾಗ್ (8,503) ಅವರನ್ನು ಹಿಂದಿಕ್ಕಿದರು. ಭಾರತದ ಪರ ಟೆಸ್ಟ್ ಕ್ರಿಕೆಟ್ ನಲ್ಲಿ ಗರಿಷ್ಟ ರನ್ ಗಳಿಸಿದವರ ಪಟ್ಟಿಯಲ್ಲಿ ಸಚಿನ್ ತೆಂಡುಲ್ಕರ್ (15,921), ರಾಹುಲ್ ದ್ರಾವಿಡ್ (13,265), ಸುನಿಲ್ ಗವಾಸ್ಕರ್ (10,122) ಹಾಗೂ ವಿವಿಎಸ್ ಲಕ್ಷ್ಮಣ್ (8,781) ನಂತರದ ನಾಲ್ಕನೇ ಸ್ಥಾನವನ್ನು ವಿರಾಟ್ ಕೊಹ್ಲಿ ತನ್ನದಾಗಿಸಿಕೊಂಡರು.

Also Read  ಏಷಿಯನ್ ಗೇಮ್ಸ್ 2023- ಭಾರತಕ್ಕೆ 2 ಬೆಳ್ಳಿ ಪದಕ

error: Content is protected !!
Scroll to Top