ಸ್ಮಶಾನಭೂಮಿ ಪ್ರತಿಭಟನೆ ಸುಖಾಂತ್ಯ- ಪಂಚಾಯತ್ ಬಳಿ ಜಾಗ ನಿಗದಿಪಡಿಸಿದ ಅಧಿಕಾರಿಗಳು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜು. 15. ತಾಲೂಕಿನ ನೆರಿಯ ಗ್ರಾಮದಲ್ಲಿ ಸ್ಮಶಾನ ಇಲ್ಲದೇ ಇರುವುದರಿಂದ ಮೃತಪಟ್ಟ ಅಂತ್ಯ ಸಂಸ್ಕಾರಕ್ಕೆ ತೊಂದರೆಯಾಗುತಿದ್ದು, ಈ ಸಮಸ್ಯೆಯನ್ನು ಶೀಘ್ರವೇ ಪರಿಹರಿಸುವಂತೆ ಆಗ್ರಹಿಸಿ ಗ್ರಾಮ ಪಂಚಾಯತ್ ಎದುರು ಗ್ರಾಮಸ್ಥರು ನಡೆಸಿದ ಪ್ರತಿಭಟನೆಗೆ ಮಣಿದ ತಹಶೀಲ್ದಾರ್ ಪಂಚಾಯತ್ ಬಳಿಯೇ ಅಂತ್ಯಕ್ರಿಯೆ ನಡೆಸುವ ಮೂಲಕ ಪ್ರಕರಣವನ್ನು ಸುಖಾಂತ್ಯಗೊಳಿಸಿದ್ದಾರೆ,

ನೆರಿಯ ಗ್ರಾಮದ ಜನತಾ ಕಾಲನಿ ನಿವಾಸಿ ಸಂಜೀವ ಗೌಡ ರವರು ಶುಕ್ರವಾರದಂದು ಮೃತಪಟ್ಟಿದ್ದು, ಅವರ ಅಂತ್ಯ ಸಂಸ್ಕಾರ ನಡೆಸಲು ಇಟ್ಟಾಡಿ ಎಂಬಲ್ಲಿ 25 ವರ್ಷಗಳ ಹಿಂದೆ ಕಾಯ್ದಿರಿಸಿದ್ದ 1..12 ಎಕರೆ ಸ್ಥಳ ಬೇರೊಬ್ಬರ ಸ್ವಾಧೀನದಲ್ಲಿದ್ದು, ಅಲ್ಲಿಗೆ ತೆರಳಲು ಸೂಕ್ತ ರಸ್ತೆಯಿಲ್ಲ. ಮನೆಮಂದಿ ಮೃತದೇಹವನ್ನು ಕೊಂಡೊಯ್ಯಲು ಬಿಡುವುದಿಲ್ಲ. ಅಲ್ಲದೇ ಗ್ರಾಮಸಭೆಗಳಲ್ಲಿ ಸ್ಮಶಾನಕ್ಕೆ ಸ್ಥಳ ಮಂಜೂರುಗಳಿಸುವಂತೆ ಹಲವು ಬಾರಿ ಬೇಡಿಕೆ ಇಟ್ಟಿದ್ದರೂ ಜನಪ್ರತಿನಿಧಿಗಳು ಯಾರೂ ಕೂಡಾ ಮನವಿಗೆ ಸ್ಪಂದಿಸಿಲ್ಲ ಎಂದು ಪ್ರತಿಭಟನೆ ನಡೆಸಿ, ನೆರಿಯ ಪಂಚಾಯತ್ ಎದುರಿನಲ್ಲೇ ಅಂತ್ಯ ಸಂಸ್ಕಾರಕ್ಕೆ ಸಿದ್ದತೆ ನಡೆಸಿದ್ದರು.

Also Read  ಅಲೆಗಳ ಹೊಡೆತಕ್ಕೆ ಸಿಲುಕಿ ಮೀನುಗಾರಿಕಾ ದೋಣಿ ಪಲ್ಟಿ - 9 ಮಂದಿ ಮೀನುಗಾರರ ರಕ್ಷಣೆ

ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಸುರೇಶ್ ಟಿ, ಹಾಗೂ ಉಳಿದ ಅಧಿಕಾರಿಗಳು ಪಂಚಾಯತ್ ಬಳಿಯಿರುವ ಜಾಗವನ್ನು ಪರಿಶೀಲಿಸಿ, ರುದ್ರಭೂಮಿಗೆ ಬೇಕಾಗಿರುವ 20ಸೆಂಟ್ಸ್ ಜಾಗವನ್ನು ಗುರುತಿಸಿದರು. ಬಳಿಕ ಗ್ರಾಮಸ್ಥರು ಅದೇ ಜಾಗದಲ್ಲಿ ಸಂಜೀವ ಗೌಡರವರ ಅಂತ್ಯಸಂಸ್ಕಾರ ನೆರವೇರಿಸಲು ವ್ಯವಸ್ಥೆ ಮಾಡುವ ಮೂಲಕ ಪ್ರತಿಭಟನೆ ಸುಖಾಂತ್ಯ ಕಂಡಿದೆ.

Also Read  ರಾತ್ರೋರಾತ್ರಿ ಮಾಜಿ ಮೇಯೆರ್ ಸಂಪತ್ ರಾಜ್ ಪರಾರಿ...?!

error: Content is protected !!
Scroll to Top