ಹಳಿಬಿಟ್ಟ ಗೂಡ್ಸ್- ರೈಲು ಸಂಚಾರ ನಿಷೇಧ

(ನ್ಯೂಸ್ ಕಡಬ) newskadaba.com ಜೈಪುರ, ಜು. 15. ಜೈಪುರ-ಮದರ್ ರೈಲ್ವೆ ವಿಭಾಗದ ಅಸಲ್ಪುರ್ ಜಾಬ್ನರ್ ಮತ್ತು ಹಿರ್ನೋಡಾ ನಿಲ್ದಾಣಗಳ ನಡುವೆ ಗೂಡ್ಸ್ ರೈಲಿನ ಎರಡು ವ್ಯಾಗನ್‌ಗಳು ಶನಿವಾರದಂದು ಹಳಿತಪ್ಪಿದ ಪರಿಣಾಮ ಕನಿಷ್ಠ ಏಳು ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.

ಜೈಪುರ-ಮದರ್ ರೈಲ್ವೇ ವಿಭಾಗದ ಅಸಲ್ಪುರ್ ಜಾಬ್ನರ್ ಮತ್ತು ಹಿರ್ನೋಡಾ ನಿಲ್ದಾಣಗಳ ನಡುವಿನ ಈ ಪ್ರದೇಶವು ವಾಯುವ್ಯ ರೈಲ್ವೇಯ ಜೈಪುರ ವಿಭಾಗದ ವ್ಯಾಪ್ತಿಗೆ ಒಳಪಡುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಅಧಿಕಾರಿಗಳು ಧಾವಿಸಿ, ಹಳಿಗಳ ಪುನಃಸ್ಥಾಪನಾ ಕೆಲಸ ನಡೆಯುತ್ತಿದ್ದು ಆದಷ್ಟು ಬೇಗ ರೈಲು ಸಂಚಾರ ಆರಂಭಗೊಳ್ಳುವ ನಿರೀಕ್ಷೆಯಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Also Read  ಸಮಾಜ ಕಲ್ಯಾಣ ಇಲಾಖೆ ಮಂಗಳೂರು ➤ ದೀಕ್ಷಾ ಭೂಮಿಯಾತ್ರೆಗೆ ಅರ್ಜಿ ಆಹ್ವಾನ

ಘಟನೆಯಿಂದಾಗಿ 19735 ಜೈಪುರ-ಮಾರ್ವಾರ್ ಜಂಕ್ಷನ್ ಎಕ್ಸ್ ಪ್ರೆಸ್, 19736 ಮಾರ್ವಾರ್ ಜಂಕ್ಷನ್-ಜೈಪುರ ಎಕ್ಸ್‌ ಪ್ರೆಸ್ ರೈಲು, 22977 ಜೈಪುರ-ಜೋಧಪುರ ಇಂಟರ್‌ಸಿಟಿ ಸೂಪರ್‌ಫಾಸ್ಟ್ ಎಕ್ಸ್‌ ಪ್ರೆಸ್, 22978 ಜೋಧ್‌ಪುರ-ಜೈಪುರ ಇಂಟರ್‌ಸಿಟಿ ಸೂಪರ್‌ಫಾಸ್ಟ್ ಎಕ್ಸ್‌ ಪ್ರೆಸ್, 09605 ಅಜ್ಮೀರ್-ಜೈಪುರ DEMU ವಿಶೇಷ ರೈಲು ಹಾಗೂ 09606 ಜೈಪುರ-ಅಜ್ಮೀರ್ DEMU ವಿಶೇಷ ರೈಲಿನ ಸಂಚಾರ ರದ್ದುಗೊಂಡಿದೆ.

error: Content is protected !!
Scroll to Top