ಚಂದ್ರಯಾನ-3 ದೇಶಕ್ಕೆ ಹೆಮ್ಮೆಯ ಕ್ಷಣ- ಸಿಎಂ ಸಿದ್ದರಾಮಯ್ಯ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 14. ಚಂದ್ರಯಾನ-3ರ ಯಶಸ್ವಿ ಉಡಾವಣೆಯು ಇಡೀ ದೇಶಕ್ಕೆ ಹೆಮ್ಮೆಯ ಕ್ಷಣವಾಗಿದೆ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸಂಶೋಧನೆ ಮಾಡಲು ಯುವ ಮನಸ್ಸುಗಳನ್ನು ಪ್ರೇರೇಪಿಸುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.


ಅಲ್ಲದೇ ಚಂದ್ರಯಾನ-3ರ ಯಶಸ್ವೀ ಉಡಾವಣೆಗಾಗಿ ಇಸ್ರೋ ಸಂಸ್ಥೆಯನ್ನು ಅಭಿನಂದಿಸಿದ್ದಾರೆ. ಇಸ್ರೋದ ಮಹಾತ್ವಕಾಂಕ್ಷೆಯ ಚಂದ್ರಯಾನ -3 ಉಪಗ್ರಹವನ್ನು ಹೊತ್ತ ಮಾರ್ಕ್ 3 ನೌಕೆಯನ್ನು ಆಂಧ್ರ ಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಶುಕ್ರವಾರ ಮಧ್ಯಾಹ್ನ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಈ ನೌಕೆಯು ಚಂದ್ರನ ಮೇಲ್ಮೈ ತಲುಪಲು 42 ದಿನಗಳನ್ನು ತೆಗೆದುಕೊಳ್ಳಲಿದ್ದು ಆಗಸ್ಟ್ 23 ಇಲ್ಲವೇ 24ರಂದು ಇಳಿಯಲಿದೆ.

Also Read  ಕಾಂತಾರ ಸಿನಿಮಾ ಜ.15ರಂದು ಟಿವಿಯಲ್ಲಿ ಪ್ರಸಾರ ➤ ನಟ ರಿಷಬ್ ಶೆಟ್ಟಿ

error: Content is protected !!
Scroll to Top