ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಕಛೇರಿಯಲ್ಲಿ ಬೀಳ್ಕೊಡುಗೆ ಸಮಾರಂಭ- ಸೇವೆಯಿಂದ ಸಂತೃಪ್ತಿ ಸಿಗುತ್ತದೆ : ಡಾ|| ಚೂಂತಾರು

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 14. ಜಿಲ್ಲಾ ಗೃಹರಕ್ಷಕದಳ ಕಛೇರಿಯಲ್ಲಿ  ಶ್ರೀಮತಿ ಕವಿತಾ ಕೆ.ಸಿ ಅಧೀಕ್ಷಕಿ ಹಾಗೂ ಪ್ರಥಮ ದರ್ಜೆ ಸಹಾಯಕಿ ಶ್ರೀಮತಿ ಅನಿತಾ ಟಿ.ಎಸ್ ಇವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಶ್ರೀಮತಿ ಕವಿತಾ ಅವರು ಸಹಾಯಕ ಆಡಳಿತ ಅಧಿಕಾರಿಯಾಗಿ ಮುಂಬಡ್ತಿ ಹೊಂದಿ ಜಿಲ್ಲಾ ಗೃಹರಕ್ಷಕದಳ ಕಛೇರಿ ಬೆಂಗಳೂರು ದಕ್ಷಿಣ ಇಲ್ಲಿ ವರ್ಗಾವಣೆಯಾಗಿರುತ್ತಾರೆ ಮತ್ತು ಶ್ರೀಮತಿ ಅನಿತಾ ಟಿ.ಎಸ್ ಅವರು ಉಡುಪಿ ಜಿಲ್ಲೆಗೆ ವರ್ಗಾವಣೆಯಾಗಿರುತ್ತಾರೆ. ದಕ್ಷಿಣ ಕನ್ನಡ ಜಿಲ್ಲಾ ಕಛೇರಿಗೆ ಉಡುಪಿ ಜಿಲ್ಲಾ ಕಛೇರಿಯ ಪ್ರಥಮ ದರ್ಜೆ ಸಹಾಯಕಿ  ಶ್ರೀಮತಿ ಶ್ಯಾಮಲ ಅವರು ವರ್ಗಾವಣೆಯಾಗಿದ್ದಾರೆ.

ಈ ಸಂದರ್ಭದಲ್ಲಿ ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ಮಾತನಾಡಿ, ಶ್ರೀಮತಿ ಕವಿತಾ ಅವರು ಫೆಬ್ರವರಿ ತಿಂಗಳಿನಲ್ಲಿ ಉಡುಪಿ ಜಿಲ್ಲೆಯಿಂದ ವರ್ಗಾವಣೆಯಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಹಾಗೂ ಶ್ರೀಮತಿ ಅನಿತಾ ಅವರು 2016ನೇ ಇಸವಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಛೇರಿಯಲ್ಲಿ 7 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರುಗಳು ಉತ್ತಮ ಕೆಲಸಗಾರರಾಗಿದ್ದು ಎಲ್ಲರೊಂದಿಗೆ ಉತ್ತಮ ಭಾಂದವ್ಯ ಹೊಂದಿದ್ದು, ನಗುಮುಖದಿಂದ ಎಲ್ಲಾ ಕೆಲಸಗಳನ್ನು ಉತ್ತಮವಾಗಿ ನಿರ್ವಹಿಸುತ್ತಿದ್ದರು. ನಿಷ್ಕಾಮ ಸೇವೆಯನ್ನು ಮಾಡಿ ಗೃಹರಕ್ಷಕರ ಮನ ಗೆದ್ದರು. ಇವರಿಗೆ ಮುಂದಿನ ಜೀವನದಲ್ಲಿ ಯಶಸ್ಸು ಸಿಗಲಿ ಎಂದು ಹಾರೈಸಿದರು ಹಾಗೂ ಶಾಲು ಹೊದಿಸಿ, ಫಲಪುಷ್ಪ ನೀಡಿ, ಸ್ಮರಣಿಕೆ ನೀಡಿ ಸನ್ಮಾನಿಸಿದರು.

Also Read  ಕಡಬ: ಕಿಡ್ಸ್ ವತಿಯಿಂದ ಆಶಾ ಕಾರ್ಯಕರ್ತೆಯರಿಗೆ ಆಹಾರ ಕಿಟ್ ವಿತರಣೆ

ಈ ಸಂದರ್ಭದಲ್ಲಿ ದ.ಕ ಜಿಲ್ಲಾ ಉಪ ಸಮಾದೇಷ್ಟರಾದ ಶ್ರೀ ರಮೇಶ್ ಇವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರತ್ಕಲ್ ಘಟಕದ ಪ್ರಭಾರ ಘಟಕಾಧಿಕಾರಿ ಶ್ರೀ ರಮೇಶ್ ಹಾಗೂ ಮೂಲ್ಕಿ ಘಟಕದ ಪ್ರಭಾರ ಘಟಕಾಧಿಕಾರಿ ಶ್ರೀ ಲೋಕೇಶ್ ಇವರು ಅನಿಸಿಕೆಗಳನ್ನು ಹಂಚಿಕೊಂಡರು. ಬಂಟ್ವಾಳ ಘಟಕ ಘಟಕಾಧಿಕಾರಿ ಶ್ರೀ ಐತಪ್ಪ, ಮಂಗಳೂರು ಘಟಕದ ಗೃಹರಕ್ಷಕರಾದ ಸುನೀಲ್ ಕುಮಾರ್, ಜ್ಞಾನೇಶ್, ಸಂದೇಶ್, ಕೇಶವ ಶೆಟ್ಟಿಗಾರ್, ಧನಂಜಯ್, ಸಂತೋಷ್, ಪ್ರಸಾದ್, ನಿಖಿಲ್,  ಸುಲೋಚನಾ, ಜಯಲಕ್ಷ್ಮೀ, ಮುಂತಾದವರು ಉಪಸ್ಥಿತರಿದ್ದರು.

Also Read  ಆರೋಗ್ಯ ಇಲಾಖೆಯಿಂದ ಪರಿಷ್ಕೃತ ಸುತ್ತೋಲೆ ➤ ಅಂತರ್‌ ರಾಜ್ಯ ಪ್ರಯಾಣಿಕರಿಗೆ ಕ್ವಾರಂಟೈನ್‌ ಅಗತ್ಯವಿಲ್ಲ...

error: Content is protected !!
Scroll to Top