ಈಗಲೇ ಗೃಹಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿ- ಜುಲೈ 27ರ ವರೆಗೆ ಮಾತ್ರ ಅವಕಾಶ

(ನ್ಯೂಸ್ ಕಡಬ) newskadaba.com ಜು, 12. ಗೃಹಜ್ಯೋತಿ ಯೋಜನೆಗೆ ಜುಲೈ 27ರವರೆಗೆ ಅರ್ಜಿ ಸಲ್ಲಿಸಬಹುದು ಎಂದು ಇಂಧನ ಸಚಿವ ಕೆ.ಜೆ ಜಾರ್ಜ್ ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಮಹತ್ವದ ಐದು ಗ್ಯಾರಂಟಿಗಳಲ್ಲಿ ಒಂದಾದ ”ಗೃಹ ಜ್ಯೋತಿ” ಯೋಜನೆ ಬಗ್ಗೆ ವಿಧಾನಸಭೆಯ ಅಧಿವೇಶನದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು,​ ಯಾರೆಲ್ಲಾ ಗೃಹಜ್ಯೋತಿಯಡಿ ಅರ್ಜಿ ಹಾಕುವುದರಿಂದ ಬಿಟ್ಟು ಹೋಗಿದ್ದಾರೋ ಅವರಿಗಾಗಿ ಈ ಅದಾಲತ್ ಮಾಡುತ್ತೇವೆ. ಅದಕ್ಕಾಗಿ ನಾವು ಈ ಯೋಜನೆಗೆ ಕಟ್ ಆಫ್ ಡೇಟ್ ಇನ್ನೂ ನೀಡಲಿಲ್ಲ. ಆದಷ್ಟು ಎಲ್ಲಾ ಅರ್ಹರಿಗೂ ಉಚಿತ ವಿದ್ಯುತ್ ಕೊಡಲು ಪ್ರಯತ್ನ ಮಾಡುತ್ತೇವೆ ಎಂದು ತಿಳಿಸಿದರು.

Also Read  ಮಂಗಳೂರು : ಮ್ಯಾನ್ ಹೋಲ್ ಗೆ ಇಳಿದ ಕಾರ್ಪೋರೇಟರ್

error: Content is protected !!
Scroll to Top