ತೆರಿಗೆ ಇಳಿಸಿ ಇಲ್ಲವೇ ಬೆಳಗ್ಗೆ 90, ಸಂಜೆ 90 ಫ್ರೀ ಕೊಡಿ ➤ ಕಾರ್ಮಿಕರಿಂದ ವಿನೂತನ ಪ್ರತಿಭಟನೆ

(ನ್ಯೂಸ್ ಕಡಬ) newskadaba.com  ಉಡುಪಿ, ಜು. 11.  ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಮದ್ಯದ ಬೆಲೆ 20% ಏರಿಕೆ ಮಾಡಿರುವ ಬೆನ್ನಲ್ಲೇ, ಮದ್ಯದ ಮೇಲಿನ ತೆರಿಗೆ ಇಳಿಕೆ ಮಾಡಬೇಕು. ಇಲ್ಲದಿದ್ದಲ್ಲಿ ಬೆಳಗ್ಗೆ 90, ಸಂಜೆ 90 ಎಣ್ಣೆ ಉಚಿತವಾಗಿ ಕೊಡಿ ಎಂದು ಆಗ್ರಹಿಸಿ ಉಡುಪಿಯಲ್ಲಿ ಕೂಲಿ ಕಾರ್ಮಿಕರು ವಿಭಿನ್ನ ಪ್ರತಿಭಟನೆ ನಡೆಸಿದ ಕುರಿತು ವರದಿಯಾಗಿದೆ.

ಉಡುಪಿ ಜಿಲ್ಲಾ ನಾಗರಿಕ ಸಮಿತಿ, ನಿತ್ಯಾನಂದ ಒಳಕಾಡುರವರ ನೇತೃತ್ವದಲ್ಲ ಉಡುಪಿಯ ಚಿತ್ತರಂಜನ್ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿದ ಕೂಲಿ ಕಾರ್ಮಿಕರು ವಿನೂತನ ರೀತಿಯಲ್ಲಿ ಸರ್ಕಾರವನ್ನು ಒತ್ತಾಯಿಸಿ, ಪ್ರತಿಭಟನೆಗೂ ಮುನ್ನ ಕುಡುಕರಿಗೆ ಹಾರ ಹಾಕಿ ಸನ್ಮಾನಿಸಿ, ಆರತಿಯೊಂದಿಗೆ ಗೌರವಿಸಲಾಯಿತು. ಸರ್ಕಾರದ ಉಚಿತ ಯೋಜನೆಗಳಿಗೆ ನಮ್ಮಿಂದಲೇ ಹಣ ಬರುತ್ತದೆ. ನಮಗೆ ಮಧ್ಯದ ಬೆಲೆ ಇಳಿಕೆ ಮಾಡಿ ಇಲ್ಲವೇ ಬೆಳಗ್ಗೆ ನೈಂಟಿ, ಸಂಜೆ ನೈಂಟಿ ಉಚಿತವಾಗಿ ಕೊಡಿ. ಅದೂ ಆಗದಿದ್ದಲ್ಲಿ ಎಣ್ಣೆಯನ್ನೇ ಬಂದ್ ಮಾಡಿ ಎಂದಿದ್ದಾರೆ.

Also Read  ಉಡುಪಿ:ನಿರುದ್ಯೋಗ ಸಮಸ್ಯೆಯಿಂದ ನೊಂದ ಯುವಕ ಆತ್ಮಹತ್ಯೆ

 

error: Content is protected !!
Scroll to Top