ಮಂಗಳೂರು: ಐಎಎಸ್ ಪ್ರೋಬೇಷನರಿ ಅಧಿಕಾರಿಯಾಗಿ ಮುಕುಲ್ ಜೈನ್ ಕರ್ತವ್ಯಕ್ಕೆ ಹಾಜರ್

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 11. ದಕ್ಷಿಣ ಕನ್ನಡ ಜಿಲ್ಲೆಗೆ ಪ್ರೊಬೇಷನರಿ ಐಎಎಸ್ ಅಧಿಕಾರಿಯಾಗಿ ನಿಯುಕ್ತಿಗೊಂಡಿರುವ ಮುಕುಲ್ ಚೈನ್ ಅವರು ನಗರದ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ಕರ್ತವ್ಯಕ್ಕೆ ಸೋಮವಾರದಂದು ಹಾಜರಾಗಿದ್ದಾರೆ.

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಪ್ರೊಬೇಷನರಿ ಅಧಿಕಾರಿಯನ್ನು ಸ್ವಾಗತಿಸಿ, ಅವರ ಕರ್ತವ್ಯಗಳ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. 2022ರ ಕರ್ನಾಟಕ ಕೆಡರ್ ನ ಐಎಎಸ್ ಅಧಿಕಾರಿಯಾಗಿರುವ ಮುಕುಲ್ ಜೈನ್, ಮೂಲತಃ ರಾಜಸ್ಥಾನದ ಆಲ್ವಾರ್ ನವರು. ಸಿವಿಲ್ ಇಂಜಿನಿಯರಿಂಗ್ ನಲ್ಲಿ ಬಿ ಟೆಕ್ ಪದವಿ ಪಡೆದಿರುವ ಅವರು 2021ರ ಬ್ಯಾಚ್ ನ ಭಾರತೀಯ ಅರಣ್ಯ ಇಲಾಖೆಯ ಅಧಿಕಾರಿಯಾಗಿದ್ದರು.

Also Read  ಬೆಳ್ತಂಗಡಿ: ಆಕ್ಟಿವಾ - ಕಾರು ನಡುವೆ ಅಪಘಾತ ► ಕಾಲೇಜು ವಿದ್ಯಾರ್ಥಿ ಮೃತ್ಯು

error: Content is protected !!
Scroll to Top