ಗುಡ್ಡ ಕುಸಿತ- ವಾಹನಗಳ ಮೇಲೆ ಉರುಳಿದ ಬಂಡೆ- ನಾಲ್ವರು ದುರ್ಮರಣ

(ನ್ಯೂಸ್ ಕಡಬ) newskadaba.com ಉತ್ತರಾಖಂಡ, ಜು. 11. ಭೂಕುಸಿತ ಉಂಟಾಗಿ ಗುಡ್ಡದಿಂದ ಬೃಹತ್‌ ಬಂಡೆ ಉರುಳಿ ಬಿದ್ದು ಕಾರು ಜಖಂಗೊಂಡು ನಾಲ್ವರು ಮೃತಪಟ್ಟು, ಆರು ಮಂದಿ ಗಾಯಗೊಂಡ ಘಟನೆ ಗಂಗೋತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರದಂದು ರಾತ್ರಿ ನಡೆದಿದೆ.

ಯಾತ್ರಾರ್ಥಿಗಳು ಗಂಗೋತ್ರಿಯಿಂದ ಉತ್ತರಕಾಶಿ ಜಿಲ್ಲೆಯ ಸುನಗರ ಪ್ರದೇಶದ ಬಳಿ ಹಿಂದಿರುಗುತ್ತಿದ್ದ  ವೇಳೆ ಈ ಅಪಘಾತ ಸಂಭವಿಸಿದೆನ್ನಲಾಗಿದೆ. ಸ್ಥಳೀಯರ ಸಹಾಯದಿಂದ ಹಲವು ಪ್ರಯಾಣಿಕರನ್ನು ರಕ್ಷಿಸಲಾಯಿತಾದರೂ ನಿರಂತರವಾಗಿ ಬೀಳುತ್ತಿದ್ದ ಬಂಡೆಗಳಿಂದಾಗಿ ರಕ್ಷಣಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ. ಮೂರು ವಾಹನಗಳು ಅವಶೇಷಗಳಡಿ ಸಿಲುಕಿವೆ ಎಂದು ವರದಿಯಾಗಿದೆ.

Also Read  ಒಮಾನ್ ದೇಶಕ್ಕೆ ತೆರಳಲು ಇಚ್ಛಿಸುವವರಿಗೆ ಗುಡ್ ನ್ಯೂಸ್: ಭಾರತ ಸೇರಿದಂತೆ 103 ದೇಶದವರಿಗೆ ಉಚಿತ ವೀಸಾ ಘೋಷಣೆ

error: Content is protected !!
Scroll to Top