ಹಾಡಹಗಲೇ ಮನೆ ಕಳ್ಳತನ- 3 ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳವು

Theft, crime, Robbery

(ನ್ಯೂಸ್ ಕಡಬ) newskadaba.com ಕುಂದಾಪುರ, ಜು. 11. ಹಾಡಹಗಲೇ ಮನೆಗೆ ನುಗ್ಗಿದ ಕಳ್ಳರು ಮೂರು ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಶಿರೂರಿನಲ್ಲಿ ಸೋಮವಾರದಂದು ಮಧ್ಯಾಹ್ನ ನಡೆದಿದೆ.

ಶಿರೂರು ಮಾರ್ಕೆಟ್ ಬಳಿ ನಿವಾಸಿ ರಾಕೇಶ್ ಪಟಗಾ‌ರ್ ದಂಪತಿಗಳು ವೃತ್ತಿಯಲ್ಲಿ ಶಿಕ್ಷಕರಾಗಿದ್ದು ಮಧ್ಯಾಹ್ನ ಊಟ ಮುಗಿಸಿ ಕಾಲೇಜಿಗೆ ಮರಳಿದ ಸಮಯ ನೋಡಿ ಹಿಂಬಾಗಿಲಿನಿಂದ ನುಗ್ಗಿದ ಕಳ್ಳರು 32 ಗ್ರಾಂ ಮಾಂಗಲ್ಯ ಸರ, 10 ಗ್ರಾಂ ಕಿವಿಯೋಲೆ, 100 ಗ್ರಾಂ ಬೆಳ್ಳಿ ಹಾಗೂ 1000 ರೂಪಾಯಿ ನಗದು ಕದ್ದೊಯ್ದಿದ್ದಾರೆ ಎನ್ನಲಾಗಿದೆ. ಇನ್ನು ಪಕ್ಕದ ಮನೆಗೆ ತೆರಳಿದ ಕಳ್ಳರು ಅಲ್ಲಿ ಬಾಗಿಲು ಒಡೆಯುತ್ತಿರುವುದನ್ನು ನೋಡಿದ ಮನೆಯವರು ಬೊಬ್ಬೆ ಹಾಕಿದಾಗ ಕಳ್ಳರು ಪರಾರಿಯಾಗಿರುವುದಾಗಿ ತಿಳಿದುಬಂದಿದೆ.

Also Read  ಕೌಕ್ರಾಡಿ: ಪೂಜೆಗೆ ಮಾವಿನ ಎಲೆ ಬೇಕೆಂದು ನಂಬಿಸಿ ಕಳ್ಳತನ ► ನಗ, ನಗದನ್ನು ದೋಚಿದ ಅಪರಿಚಿತ ವ್ಯಕ್ತಿ

error: Content is protected !!
Scroll to Top