ಎರಡು ಧಮಾಕ ಪ್ಲಾನ್ ಪರಿಚಯಿಸಿದೆ ಜಿಯೋ-ರಿಲಯನ್ಸ್

(ನ್ಯೂಸ್ ಕಡಬ)news kadaba.com ಜು.10: ಟೆಲಿಕಾಂ ಕಂಪನಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ರಿಲಯನ್ಸ್ ಜಿಯೋ ಇದೀಗ ತನ್ನ ಪ್ರಿಪೇಯ್ಡ್  ಬಳಕೆದಾರರಿಗೆ ಎರಡು ಹೊಸ ಡೇಟಾ ಬೂಸ್ಟರ್ ಯೋಜನೆಗಳನ್ನು ಪರಿಚಯಿಸಿದೆ. ಜಿಯೋ ಹೊಸದಾಗಿ 19 ರೂ. ಮತ್ತು 29 ರೂಪಾಯಿಯ ಡೇಟಾ ಬೂಸ್ಟರ್ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಈ ಮೂಲಕ ರಿಲಯನ್ಸ್ ಜಿಯೋ ಬಳಕೆದಾರರು ಈಗ 7 ಡೇಟಾ ಬೂಸ್ಟರ್ ಯೋಜನೆಗಳನ್ನು ಹೊಂದಿದ್ದಾರೆ.

19 ರೂ. ಡೇಟಾ ಬೂಸ್ಟರ್ ಯೋಜನೆ ಅಡಿಯಲ್ಲಿ, ರಿಲಯನ್ಸ್ ಜಿಯೋ ಬಳಕೆದಾರರು ಹೈ-ಸ್ಪೀಡ್ 1.5GB ಡೇಟಾವನ್ನು ಪಡೆಯುತ್ತಾರೆ. ಅಂತೆಯೆ 29 ರೂ. ವಿನ ಡೇಟಾ ಬೂಸ್ಟರ್ ಯೋಜನೆಯು 2.5GB ಡೇಟಾ ಆಯ್ಕೆಯನ್ನು ಹೊಂದಿದೆ. ಈ ಎರಡೂ ಯೋಜನೆಗಳು ಹೈ-ಸ್ಪೀಡ್ ಡೇಟಾವನ್ನು ಒದಗಿಸುತ್ತವೆ. ಆದರೆ ಒಮ್ಮೆ ನಿಗದಿಪಡಿಸಿದ ಡೇಟಾ ಮಿತಿಯನ್ನು ಮೀರಿದರೆ ಈ ಡೇಟಾ ವೇಗವು 64 Kbps ಗೆ ಕಡಿಮೆಯಾಗುತ್ತದೆ. ಅಲ್ಲದೆ, ಇವು ಡೇಟಾ ಬೂಸ್ಟರ್ ಯೋಜನೆಗಳಾಗಿರುವ ಕಾರಣ ಬಳಕೆದಾರರು ಡೇಟಾ ಪ್ರಯೋಜನಗಳನ್ನು ಮಾತ್ರ ಪಡೆಯುತ್ತಾರೆ ಯಾವುದೇ ಎಸ್​ಎಮ್​ಎಸ್ ಅಥವಾ ಅನಿಯಮಿತ ಕರೆ ಸೌಲಭ್ಯವಿಲ್ಲ.

Also Read  ಇನ್ನುಮುಂದೆ ಜಿಮೇಲ್'ನಲ್ಲಿ ಏಕಕಾಲಕ್ಕೆ 50 ಮೇಲ್ ಡಿಲೀಟ್..! ಆಂಡ್ರಾಯ್ಡ್ ಜಿಮೇಲ್'ನಲ್ಲಿ "ಸೆಲೆಕ್ಟ್ ಆಲ್" ಸೇರ್ಪಡೆ

ಇತ್ತೀಚೆಗಷ್ಟೆ ರಿಲಯನ್ಸ್ ಜಿಯೋದ ಪ್ರತಿಸ್ಪರ್ಧಿ ವೊಡಾಫೋನ್ ಐಡಿಯಾ ಕೂಡ ಎರಡು ಹೊಸ ಡೇಟಾ ಪ್ಯಾಕ್‌ಗಳನ್ನು ಪರಿಚಯಿಸಿದೆ. ವಿ ತನ್ನ ಬಳಕೆದಾರರಿಗಾಗಿ ಸೂಪರ್ ಡೇ ಮತ್ತು ಸೂಪರ್ ಅವರ್ ಡೇಟಾ ಪ್ಯಾಕ್‌ಗಳನ್ನು ಹೊರತಂದಿದೆ. ಸೂಪರ್ ಅವರ್ ಪ್ಯಾಕ್‌ನ ಬೆಲೆ 24 ರೂ ಆಗಿದೆ. ಇದರ ಮೂಲಕ ಬಳಕೆದಾರರು ಒಂದು ಗಂಟೆಯವರೆಗೆ ಅನಿಯಮಿತ ಡೇಟಾ ಪ್ರಯೋಜನಗಳನ್ನು ಪಡೆಯಬಹುದು. ಇನ್ನು ಸೂಪರ್ ಡೇ ಪ್ಯಾಕ್‌ನ ಬೆಲೆ 49 ರೂ, ಆಗಿದ್ದು ಇದು 24 ಗಂಟೆಗಳ ಮಾನ್ಯತೆಯೊಂದಿಗೆ 6GB ಯ ಡೇಟಾ ಪ್ರಯೋಜನವನ್ನು ನೀಡುತ್ತದೆ.

Also Read  ಈ 8 ರಾಶಿಯವರಿಗೆ, ವಿವಾಹ ಯೋಗ, ವ್ಯಾಪಾರ ಅಭಿವೃದ್ಧಿ, ಮನೆಯಲ್ಲಿನ ಸಮಸ್ಯೆ ಗಂಡ-ಹೆಂಡತಿ ಕಲಹ ದೂರವಾಗುತ್ತದೆ

 

error: Content is protected !!
Scroll to Top