(ನ್ಯೂಸ್ ಕಡಬ) newskadaba.com ಪುತ್ತೂರು, ಜ.25. ಎಲ್ಲರಂತೆ ನಡೆದಾಡಿ ಸುಂದರ ಜೀವನ ನಿರ್ವಹಿಸಬೇಕಿದ್ದ ಯುವಕನೋರ್ವ ಸುಮಾರು ಆರು ವರ್ಷಗಳಿಂದ ಕಿಡ್ನಿ ವೈಫಲ್ಯ ತೊಂದರೆಯಿಂದ ಬಳಲುತ್ತಿದ್ದು, ಇದೀಗ ಚಿಕಿತ್ಸೆಗಾಗಿ ದಾನಿಗಳ ನೆರವು ಯಾಚಿಸಿದ್ದಾರೆ.
ಇಲ್ಲಿನ ಮೊಟ್ಟೆತಡ್ಕ ನಿವಾಸಿಯಾದ ಅಬ್ದುಲ್ ಶಕೀರ್(30) ಸುಮಾರು 6 ವರುಷಗಳಿಂದ ಎರಡು ಕಾಲಿನ ಶಕ್ತಿಯನ್ನು ಕಳೆದುಕೊಂಡು ನಡೆದಾಡಲು ಆಗದೆ ಕಷ್ಟಕರ ಜೀವನ ಸಾಗಿಸುತ್ತಿದ್ದಾನೆ. ವಯಸ್ಸಾದ ತಾಯಿ ಮತ್ತು ಮಗ ಒಂದು ಸಣ್ಣ ಬಾಡಿಗೆ ಮನೆಯಲ್ಲಿ ವಾಸಮಾಡುತ್ತಿದ್ದಾರೆ. ಇವರ ದಯನೀಯ ಸ್ಥಿತಿ ನೋಡುಗರ ಕಣ್ಣಲ್ಲಿ ನೀರು ಬರಿಸುತ್ತಿದೆ. ಈ ಯುವಕನ 2 ಕಿಡ್ನಿಯೂ ವೈಫಲ್ಯಕ್ಕೀಡಾಗಿದ್ದು ಒಂದು ಕಿಡ್ನಿ ಸಂಪೂರ್ಣ ಸ್ತಗಿತಗೊಂಡಿದೆ. ಈಗ ಇನ್ನೊಂದು ಕಿಡ್ನಿ ಕೂಡ ಕೊನೆಯ ಹಂತಕ್ಕೆ ತಲುಪಿದೆ ಎಂದು ವೈದ್ಯರು ತಿಳಿಸಿದ್ದು ವಾರದಲ್ಲಿ 3 ಬಾರಿ ಡಯಾಲಿಸಿಸ್ ಮಾಡುತ್ತಿದ್ದಾರೆ. ತಿಂಗಳಿಗೆ ಸರಿ ಸುಮಾರು 20 ರಿಂದ 30 ಸಾವಿರ ರೂಪಾಯಿ ಆಸ್ಪತ್ರೆಯ ಖರ್ಚು ಬರುತ್ತಿದ್ದು, ಜೀವನ ಸಾಗಿಸುವುದೇ ಕಷ್ಟವಾಗಿರುವಾಗ ಮಗನಿಗೆ ಬೇಕಾಗಿ ಆ ತಾಯಿ ರಾತ್ರಿ ಹಗಲೆನ್ನದೆ ನೋವು ಅನುಭವಿಸುತ್ತಿದ್ದಾರೆ. ಇಷ್ಟೊಂದು ಖರ್ಚು ಬರುತ್ತಿರುವಾಗ ಈ ತಾಯಿಗೆ ದಿಕ್ಕು ತೋಚದಂತಾಗಿದೆ. ಯಾವುದೇ ಆದಾಯ ಇಲ್ಲದೆ ಆಸ್ಪತ್ರೆಗೆ ಹೋಗಲು ಹಣವಿಲ್ಲದೇ ಮನೆಯಲ್ಲಿಯೇ ನೋವು ಅನುಭವಿಸುತ್ತಿದ್ದು ಇಂತಹ ಸ್ಥಿತಿ ನೋಡುವಾಗ ಎಂತಹ ಕಲ್ಲು ಹೃದಯವೂ ಕರಗಬಹುದು. ದಿಕ್ಕು ತೋಚದ ಈ ಯುವಕನಿಗೆ ಸಹೃದಯಿ ದಾನಿಗಳ ಆರ್ಥಿಕ ನೆರವಿನ ಅಗತ್ಯವಿದೆ.
ಸಹಾಯ ಮಾಡಲಿಚ್ಛಿಸುವವರು 9945556457 ಸಂಖ್ಯೆಯನ್ನು ಸಂಪರ್ಕಿಸಬಹುದು ಅಥವಾ ಕೆಳಗೆ ಕೊಟ್ಟಿರುವ ಬ್ಯಾಂಕ್ ಖಾತೆಗೆ ಹಣವನ್ನು ಜಮಾಯಿಸಬಹುದು.
A/c. No. 02482200031555,
IFSC Code: SYNB0000248
Syndicate Bank CCF Puttur