ಮಂಗಳೂರು: ಬಸ್ಸಿನಲ್ಲಿ ಕುಸಿದು ಬಿದ್ದು ಬೆಳ್ತಂಗಡಿಯ ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜೂ. 27. ಬಸ್ಸಿನಲ್ಲಿ ಪ್ರಯಾಣಿಸುತ್ತಿರುವಾಗಲೇ ವ್ಯಕ್ತಿಯೊಬ್ಬರು ಹೃದಯಾಘತದಿಂದ ಕುಸಿದು ಬಿದ್ದು ಮೃತಪಟ್ಟ ಘಟನೆ ಮಂಗಳೂರಿನ ಪಡೀಲ್ ಬಳಿ ನಡೆದಿದೆ.

ಮೃತ ವ್ಯಕ್ತಿಯನ್ನು ಲಾಯಿಲ ನಿವಾಸಿ ತಾಜ್ ಬಾವುಂಞಿ ಎಂದು ಗುರುತಿಸಲಾಗಿದೆ. ಇವರು ಕೆಲಸಕ್ಕೆಂದು ಮಂಗಳೂರಿಗೆ ತೆರಳಿ ಸಂಜೆ ಮನೆಗೆ ಹಿಂದಿರುಗಿ ಬಸ್ಸಿನಲ್ಲಿ ಬರುತಿದ್ದ ವೇಳೆ ಮಂಗಳೂರಿನ ಪಡೀಲ್ ಬಳಿ ಬಸ್ಸಿನಲ್ಲಿಯೇ ಕುಸಿದು ಬಿದಿದ್ದಾರೆ. ಕೂಡಲೇ ಸಮೀಪದ ಆಸ್ಪತ್ರೆಯ ಬಳಿ ಬಸ್ ನಿಲ್ಲಿಸಿ ಕಂಡೆಕ್ಟರ್ ಸೇರಿದಂತೆ ಬಸ್ಸಲ್ಲಿದ್ದವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅದರೆ ಅಲ್ಲಿ ಪರೀಕ್ಷಿಸಿದ ವೈದ್ಯರು ಅವರು ಮೃತ ಪಟ್ಟಿರುವ ಬಗ್ಗೆ ದೃಢಪಡಿಸಿದ್ದಾರೆ.

Also Read  ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ➤ ಸಪ್ಟೆಂಬರ್ 17 ರಂದು 2019-20ನೇ ಸಾಲಿನ ದ.ಕ. ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ
error: Content is protected !!
Scroll to Top