ಮಂಗಳೂರು: ಶಾಲಾ- ಕಾಲೇಜುಗಳ ವ್ಯಾಪ್ತಿಯಲ್ಲಿ ಅಮಲು ಪದಾರ್ಥ ಮಾರಾಟ ➤ ದಿಢೀರ್ ದಾಳಿ ನಡೆಸಿ ದಂಡ ವಿಧಿಸಿದ ಪೊಲೀಸರು

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 26. ನಗರದ ಕಮೀಷನರೇಟ್ ವ್ಯಾಪ್ತಿಯ ಶಾಲಾ ಕಾಲೇಜುಗಳ ಬಳಿ ಗುಟ್ಕಾ, ತಂಬಾಕು ಸಹಿತ ಅಮಲು ಪದಾರ್ಥ ಮಾರಾಟ ಮಾಡುತ್ತಿದ್ದ 153 ಅಂಗಡಿಗಳ ಮೇಲೆ ಮಂಗಳೂರು ನಗರ ಪೊಲೀಸರು ದಿಢೀರ್ ದಾಳಿ ನಡೆಸಿ ಪ್ರಕರಣ ದಾಖಲಿಸಿ ದಂಡ ವಿಧಿಸಿದ ಘಟನೆ ವರದಿಯಾಗಿದೆ.

ಶಾಲಾ ಕಾಲೇಜುಗಳ ವ್ಯಾಪ್ತಿಯಲ್ಲಿದ್ದ ಒಟ್ಟು 348 ಅಂಗಡಿಗಳಿಗೆ ಪೊಲೀಸರು ಧಿಡೀರ್‌ ದಾಳಿ ನಡೆಸಿದ್ದು, ಈ ವೇಳೆ 153 ಅಂಗಡಿಗಳಲ್ಲಿ ಅಮಲು ಪದಾರ್ಥಗಳು ಸಿಕ್ಕಿವೆ. ಈ ಹಿನ್ನೆಲೆ ಅಂಗಡಿಗಳ ವಿರುದ್ಧ COTPA (Cigarettes and Other Tobacco Products Act) ಕಾಯ್ದೆಯಡಿ ಪ್ರಕರಣ ದಾಖಲಿಸಿ ದಂಡ ವಿಧಿಸಿದ್ದಾರೆ.

Also Read  ಗೃಹಲಕ್ಷ್ಮಿ ಯೋಜನೆ ಹೆಸರಲ್ಲಿ ಅಕ್ರಮವಾಗಿ ಹಣ ಪಡೆಯುತ್ತಿದ್ದ 3 ಸೈಬರ್ ಕೇಂದ್ರಗಳು - FIR ದಾಖಲು

error: Content is protected !!
Scroll to Top