(ನ್ಯೂಸ್ ಕಡಬ) newskadaba.com ಶ್ರೀನಗರ, ಜೂ. 26. ಹವಾಮಾನ ವೈಪರೀತ್ಯದಿಂದ ಶ್ರೀನಗರದಿಂದ ಜಮ್ಮುಗೆ ಹೊರಟಿದ್ದ ಇಂಡಿಗೊ ವಿಮಾನವು ಪಾಕಿಸ್ತಾನದ ವಾಯುಪ್ರದೇಶವನ್ನು ಪ್ರವೇಶಿಸಿದ ಘಟನೆ ನಡೆದಿದೆ.
ಇಂಡಿಗೊ 6ಇ – 2124 ವಿಮಾನವು ಜಮ್ಮುವಿನಿಂದ ಶ್ರೀನಗರಕ್ಕೆ ತೆರಳಬೇಕಾಗಿತ್ತು, ಆದರೆ ಹವಾಮಾನ ವೈಪರೀತ್ಯದಿಂದಾಗಿ ಪಾಕಿಸ್ತಾನದ ವಾಯು ಪ್ರದೇಶವನ್ನು ಪ್ರವೇಶಿಸಿದ್ದು ತಕ್ಷಣವೇ ಪೈಲಟ್ ವಿಮಾನವನ್ನು ಅಮೃತ್ ಸರದಲ್ಲಿ ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ಇನ್ನು ಪೈಲಟ್ ನ ಸಮಯಪ್ರಜ್ಞೆಯನ್ನು ಎರಡೂ ರಾಷ್ಟ್ರಗಳ ನಾಗರಿಕ ವಿಮಾನಯಾನ ಅಧಿಕಾರಿಗಳು ಶ್ಲಾಘಿಸಿದ್ದಾರೆ.