ನಾಳೆಯಿಂದ ಬೆಂಗಳೂರು- ಧಾರವಾಡ ವಂದೇ ಭಾರತ್ ರೈಲು ಸಂಚಾರ ಆರಂಭ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ. 26. ನಾಳೆಯಿಂದ ಬೆಂಗಳೂರು-ಧಾರವಾಡ ನಡುವೆ ಬಹುನಿರೀಕ್ಷಿತ ವಂದೇ ಭಾರತ್‌ ರೈಲು ಸಂಚಾರ ಪ್ರಾರಂಭಗೊಳ್ಳಲಿದ್ದು, ವಿಡಿಯೋ ಕಾನ್ಫೆರೆನ್ಸ್‌ ಮೂಲಕ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಈ ಮೂಲಕ ಕರ್ನಾಟಕಕ್ಕೆ ಮೈಸೂರು-ಚೆನ್ನೈ ಬಳಿಕ 2ನೇ ವಂದೇ ಭಾರತ್‌ ರೈಲು ಸೇವೆ ಲಭ್ಯವಾಗಲಿದೆ.

ಈ ರೈಲು ಯಶವಂತಪುರ, ದಾವಣಗೆರೆ, ಹುಬ್ಬಳ್ಳಿಯಲ್ಲಿ ನಿಲುಗಡೆಯನ್ನು ಹೊಂದಿದ್ದು, ಸುಮಾರು ಏಳು ಗಂಟೆಗಳಲ್ಲಿ ಗುರಿ ತಲುಪುತ್ತದೆ. ಮಂಗಳವಾರದಂದು ಹೊರತುಪಡಿಸಿ ವಾರದ ಆರು ದಿನಗಳ ಕಾಲ ಇದು ಪ್ರಯಾಣಿಕರಿಗೆ ಸೇವೆ ಒದಗಿಸಲಿದೆ. ಜತೆಗೆ, ಇದು ಕರ್ನಾಟಕದಲ್ಲಿ ಮಾತ್ರ ಓಡಾಲಿರುವ ರಾಜ್ಯಕ್ಕೆ ಲಭಿಸುವ ಮೊದಲ ವಂದೇ ಭಾರತ್‌ ರೈಲಿ ಕೂಡ ಆಗಲಿದೆ.

Also Read  ಈರುಳ್ಳಿ ಬೆಲೆ ಏಕಾಏಕಿ ಕುಸಿತ..!➤ಕಂಗಾಲಾದ ರೈತರು

error: Content is protected !!