ಹಸಿರೇ ಉಸಿರು ➤ ವನಮಹೋತ್ಸವ ಕಾರ್ಯಕ್ರಮದಲ್ಲಿ ಶ್ರೀ ಕ್ರಷ್ಣಪ್ಪ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 26. ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ವತಿಯಿಂದ ಪದವಿನಂಗಡಿ, ಮಂಗಳೂರು ಇಲ್ಲಿ ಪ್ರಥ್ವಿ  ಚಾರಿಟೇಬಲ್ ಟ್ರಸ್ಟ್ ಇವರ ಸಹಕಾರದೊಂದಿಗೆ ವನಮಹೋತ್ಸವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ದ. ಕ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ಚಾಲನೆ ನೀಡಿದರು. ಸುಮಾರು 25 ಹಣ್ಣಿನ ಗಿಡಗಳನ್ನು ಪದವಿನಂಗಡಿ ಪರಿಸರದ ಕೆ ಹೆಚ್ ಬಿ ಕಾಲೋನಿ  ಬೊಂದೆಲ್ ಇಲ್ಲಿನ ಮೈದಾನದ ಸುತ್ತ  ನೆಡಲಾಯಿತು.

ಪರಿಸರ ಪ್ರೇಮಿ ಕ್ರಷ್ಣಪ್ಪ ಅವರು ಮಾತನಾಡಿ, ಪರಿಸರ ಉಳಿಸಲು ಎಲ್ಲರೂ ಕೈ ಜೋಡಿಸಿ ಮತ್ತು ಗಿಡಗಳನ್ನು ನೆಟ್ಟು ಪರಿಸರ ಉಳಿಸಲು ಕಟಿ ಬದ್ಧರಾಗಿ ಎಂದು ಕರೆ ನೀಡಿದರು. ಹಸಿರೇ ಇಲ್ಲದೆ ಉಸಿರು ಇಲ್ಲ ಎಂದು ನುಡಿದರು. ಈ ಸಂದರ್ಭದಲ್ಲಿ ಪರಿಸರ ಪ್ರೇಮಿ ಶ್ರೀ ರಾಮಚಂದ್ರ ಭಟ್, ಅಕ್ಷಯ್  ಶೆನೈ, ಸಂತೋಷ್, ಶೈಲೇಶ್, ಗುರುರಾಜ್ ಹಾಗೂ ಗೃಹರಕ್ಷಕರಾದ ಸುನಿಲ್, ದಿವಾಕರ್, ಅರವಿಂದ್, ನಿಖಿಲ್, ರಂಜಿತ್, ಜ್ಞಾನೇಶ,ಕನಕಪ್ಪ ಮುಂತಾದವರು ಉಪಸ್ಥಿತರಿದ್ದರು.

Also Read  ವಿಟ್ಲ: ಮದುಮಗನಿಂದ ಕೊರಗಜ್ಜನ ವೇಷ ಧರಿಸಿ ಅವಹೇಳನ ಪ್ರಕರಣ ➤ ಇಬ್ಬರ ಬಂಧನ, ಪ್ರಮುಖ ಆರೋಪಿ ಮದುಮಗ ನಾಪತ್ತೆ

error: Content is protected !!
Scroll to Top