ಎಂಎಲ್ ಸಿ ಉಪಚುನಾವಣೆ ➤ ಶೆಟ್ಟರ್, ತಿಪ್ಪಣ್ಣ, ಬೋಸರಾಜು ಅವಿರೋಧ ಆಯ್ಕೆ

(ನ್ಯೂಸ್ ಕಡಬ) newskadaba.com ಬೆಂಗಳೂರುಜೂ. 24. ವಿಧಾನಪರಿಷತ್​​ ನ ತೆರವಾಗಿದ್ದ ಮೂರು ಸ್ಥಾನಗಳಿಗೆ ಕಾಂಗ್ರೆಸ್​​ ಪಕ್ಷದ ಅಭ್ಯರ್ಥಿಗಳಾದ ಜಗದೀಶ್ ಶೆಟ್ಟರ್, ತಿಪ್ಪಣ್ಣಪ್ಪ ಕಮಕನೂರ್, ಹಾಗೂ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಎನ್‌.ಎಸ್ ಬೋಸರಾಜು ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ವಿಧಾನಪರಿಷತ್ ಉಪಚುನಾವಣೆಗೆ ಸಲ್ಲಿಸಿದ್ದ ನಾಮಪತ್ರ ವಾಪಸ್ ಪಡೆಯಲು ಇಂದು ಕೊನೆಯ ದಿನವಾಗಿತ್ತು, ಆದರೆ, ಕಣದಲ್ಲಿ ಮೂವರೇ ಇದ್ದ ಕಾರಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಲಾಗಿದೆ. ಇನ್ನು. ಜೂನ್ 30ರಂದು ಚುನಾವಣೆ ನಿಗದಿಯಾಗಿತ್ತು.

Also Read  ಕರ್ನಾಟಕ ಕಲ್ಯಾಣ ಉತ್ಸವದ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಸಿಎಂ

error: Content is protected !!
Scroll to Top