(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 24. ಪ್ರಧಾನಮಂತ್ರಿಗಳ ಉದ್ಯೋಗ ಸೃಜನ ಯೋಜನೆಯಡಿ ಜಿಲ್ಲೆಯ ನಿರುದ್ಯೋಗಿ ಯುವಕ, ಯುವತಿಯರಿಗೆ ಸ್ವಉದ್ಯೋಗ ಕೈಗೊಳ್ಳಲು ಬ್ಯಾಂಕ್ ಗಳ ಮೂಲಕ ಸಹಾಯಧನ ಪಡೆಯಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹತೆಗಳು:
ಅಭ್ಯರ್ಥಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಉತ್ಪಾದನೆ ಚಟುವಟಿಕೆಗಳಿಗೆ ಯೋಜನೆ ವೆಚ್ಚ 50 ಲಕ್ಷ ರೂ.ಗಳು, ಸೇವಾ ಚಟುವಟಿಕೆಗಳಿಗೆ ಯೋಜನೆ ವೆಚ್ಚ 20 ಲಕ್ಷ ರೂ.ಗಳು, ಘಟಕಗಳಿಗೆ 10 ಲಕ್ಷಕ್ಕಿಂತ ಹೆಚ್ಚಿನ ಯೋಜನೆಗಳಿಗೆ ಕನಿಷ್ಠ 8ನೇ ತರಗತಿ ತೇರ್ಗಡೆಯಾಗಿರಬೇಕು. ಸೇವಾ ಚಟುವಟಿಕೆಗಳಿಗೆ 5 ಲಕ್ಷಕ್ಕಿಂತ ಹೆಚ್ಚಿನ ಯೋಜನೆಗಳಿಗೆ ಕನಿಷ್ಠ 8ನೇ ತರಗತಿ ತೇರ್ಗಡೆಯಾಗಿರಬೇಕು. ಈ ಯೋಜನೆಯಲ್ಲಿ ಹೊಸ ಘಟಕಗಳಿಗೆ ಮಾತ್ರ ಅವಕಾಶವಿದೆ. ಇತರ ಸ್ವಯಂ ಉದ್ಯೋಗ ಯೋಜನೆಯಡಿ ಈಗಾಗಲೇ ಧನಸಹಾಯ ಪಡೆದಿದ್ದಲ್ಲಿ ಈ ಯೋಜನೆಗೆ ಅರ್ಹರಾಗುವುದಿಲ್ಲ.
ಫಲಾನುಭವಿಗಳು ಭರಿಸಬೇಕಾದ ಸಹಾಯಧನಗಳ ವಿವರ:
ಸಾಮಾನ್ಯ ವರ್ಗ ಫಲಾನುಭವಿಯ ವಂತಿಗೆ ಶೇ.10%, ನಗರ ಪ್ರದೇಶದವರಿಗೆ ಶೇ.15%, ಗ್ರಾಮೀಣ ಪ್ರದೇಶದವರಿಗೆ ಶೇ.25%. ಹಾಗೂ ವಿಶೇಷ ವರ್ಗ (ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು, ಮಹಿಳೆಯರು, ಮಾಜಿ ಸೈನಿಕರು ಹಾಗೂ ವಿಕಲಚೇತನ ಫಲಾನುಭವಿಯ ವಂತಿಗೆ ಶೇ.5%, ನಗರ ಪ್ರದೇಶದವರಿಗೆ ಶೇ.25% ಹಾಗೂ ಗ್ರಾಮೀಣ ಪ್ರದೇಶದವರಿಗೆ ಶೇ.35% ಸಹಾಯಧನ ನೀಡಲಾಗುವುದು. ಆನ್‍ಲೈನ್ ಪೋರ್ಟಲ್ PMEGPWEBSITE: www.//kviconline.gov.in/pmegpeportal ನಲ್ಲಿ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವಿಲ್ಲ. ಅರ್ಜಿ ಸಲ್ಲಿಸಿದ ನಂತರ ಅಭ್ಯರ್ಥಿಗಳ ದಾಖಲಾತಿಗಳನ್ನು ಪರಿಶೀಲನೆ ಮಾಡಿ ನಂತರ ಆನ್‍ಲೈನ್‍ನಲ್ಲಿ ಅರ್ಜಿಯನ್ನು ಸಂಬಂಧಿಸಿದ ಬ್ಯಾಂಕ್‍ಗಳಿಗೆ ಕಳುಹಿಸಲಾಗುವುದು. ಅರ್ಜಿ ಸಲ್ಲಿಕೆಯಾದ ನಂತರ ವಿವಿಧ ಹಂತಗಳ ಪ್ರಗತಿಯನ್ನು ಆನ್‍ಲೈನ್ ನ ಸ್ಟೇಟಸ್ ನಲ್ಲಿ ವೀಕ್ಷಿಸಬಹುದು. ಆನ್‍ಲೈನ್ ನಲ್ಲಿ ಅರ್ಜಿ ಹಾಕಲು ಏಜೆನ್ಸಿ ಹೆಸರು ಡಿಐಸಿ ಎಂದು ನಮೂದಿಸಿರಬೇಕು. ಹೆಚ್ಚಿನ ಮಾಹಿತಿಗೆ ಜಂಟಿ ನಿರ್ದೇಶಕರ ಕಛೇರಿ, ಜಿಲ್ಲಾ ಕೈಗಾರಿಕಾ ಕೇಂದ್ರ, ಇಂಡಸ್ಟ್ರಿಯಲ್ ಎಸ್ಟೇಟ್ ಮಂಗಳೂರು ದೂ.ಸಂಖ್ಯೆ:0824-2214021 ಅನ್ನು ಸಂಪರ್ಕಿಸುವಂತೆ ಎಂದು ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.