ನಾಯಿಯನ್ನು ಕೊಂದಿದ್ದ ಚಿರತೆಯ ಹತ್ಯೆ ➤ ಆರೋಪಿ ಅರೆಸ್ಟ್..!

(ನ್ಯೂಸ್ ಕಡಬ) newskadaba.com ಚಾಮರಾಜನಗರ, ಜೂ. 23. ಸಾಕು ನಾಯಿಯನ್ನು ಕೊಂದಿದ್ದ ಚಿರತೆಯೊಂದನ್ನು ಹತ್ಯೆಗೈದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.

ಬಂಧಿತನನ್ನು ಮಲ್ಲಯ್ಯನಪುರ ಗ್ರಾಮದ ರಮೇಶ್ ಎಂದು ಗುರುತಿಸಲಾಗಿದೆ. ಜಿ.ಆರ್.ಗೋವಿಂದರಾಜು ಎಂಬವರ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಈತ ಸಾಕು ನಾಯಿಯನ್ನು ಕೊಂದಿದ್ದ ಚಿರತೆಯ ಮೇಲೆ ಸೇಡು ತಿರಿಸಿಕೊಳ್ಳಲೆಂದು ಸತ್ತ ನಾಯಿಯ ಕಳೇಬರದ ಮೇಲೆ ಕೀಟನಾಶಕವನ್ನು ಸಿಂಪಡಿಸಿಟ್ಟಿದ್ದನು. ಇದರಿಂದಾಗಿ ಚಿರತೆಯು ಜಮೀನಿನಲ್ಲಿ ಸತ್ತುಬಿದ್ದಿತ್ತು ಎನನಲಾಗಿದೆ. ಸ್ಥಳಕ್ಕೆ ಧಾವಿಸಿದ ಅರಣ್ಯಾಧಿಕಾರಿಗಳು ಚಿರತೆಯೆ ಆಂತ್ಯಕ್ರಿಯೆ ನಡೆಸಿದ್ದಾರೆ.

Also Read  ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಎಫ್‌ಐಆರ್ ಗೆ ಆದೇಶ

error: Content is protected !!
Scroll to Top