ಚಾಕೋಲೇಟ್ ಕೊಡಿಸುವುದಾಗಿ ಆಮಿಷವೊಡ್ಡಿ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ

(ನ್ಯೂಸ್ ಕಡಬ) newskadaba.com ರಾಯಚೂರು, ಜೂ. 22. ಚಾಕೋಲೇಟ್ ಕೊಡಿಸುವ ನೆಪದಲ್ಲಿ 11 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.

ಅತ್ಯಾಚಾರವೆಸಗಿದಾತನನ್ನು ಸಪನ್ ಮಂಡಲ್(52) ಎಂದು ಗುರುತಿಸಲಾಗಿದೆ. ಈತ ಚಾಕೋಲೇಟ್ ಕೊಡಿಸುವ ನೆಪದಲ್ಲಿ 11 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾನೆ ಎನ್ನಲಾಗಿದೆ. ಬಾಲಕಿಯ ಮನೆಯ ಪಕ್ಕದಲ್ಲೇ ವಾಸವಿದ್ದ ಸಪನ್ ಮಂಡಲ್ ಚಾಕೋಲೇಟ್ ಕೊಡಿಸುವುದಾಗಿ ಪುಸಲಾಯಿಸಿ ಸ್ಕೂಟರ್ ಹತ್ತಿಸಿಕೊಂಡು, ನಂತರ ಜಮೀನಿಗೆ ಕರೆದೊಯ್ದು ಅತ್ಯಾಚಾರವೆಸಗಿರುವ ಕುರಿತು ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಸಡೆಸಿ, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

Also Read  ದಿನಗೂಲಿ ನೌಕರರ ಮೇಲೆ ದೌರ್ಜನ್ಯ, ಮುನಿರತ್ನ ಮೇಲೆ ಮತ್ತೊಂದು ಎಫ್‌ಐಆರ್

error: Content is protected !!
Scroll to Top