ಎಸ್‌ಡಿಪಿಐ ಸಂಸ್ಥಾಪನ ದಿನಾಚರಣೆಯ ಅಂಗವಾಗಿ ಗೂನಡ್ಕದಲ್ಲಿ ಧ್ವಜಾರೋಹಣ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಗೂನಡ್ಕ, ಜೂ.‌ 22. ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ 15ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಗೂನಡ್ಕದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಪಿಐ ಸುಳ್ಯ ರೂರಲ್ ಬ್ಲಾಕ್ ಉಪಾಧ್ಯಕ್ಷರಾದ ಸಲೀಂ ಗೂನಡ್ಕ ವಹಿಸಿದರು. ಧ್ವಜಾರೋಹಣವನ್ನು ಎಸ್ಡಿಪಿಐ ಸಂಪಾಜೆ ಗ್ರಾಮ ಸಮಿತಿ ಕಾರ್ಯದರ್ಶಿ ಸಾಜೀದ್ ಐ ಜಿ ನೆರವೇರಿಸಿದರು. ಸಂದೇಶ ಭಾಷಣಗೈದ ಎಸ್ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಉಸ್ತುವಾರಿ ಅಬ್ದುಲ್ ಕಲಾಂ ಸುಳ್ಯ, ಪಕ್ಷ 14 ವರ್ಷದಲ್ಲಿ ನಡೆದು ಬಂದ ಹಾದಿಯನ್ನು, ಪಕ್ಷದ ಧ್ಯೇಯವನ್ನು ಸಾರಿದರು. ಮುನೀರ್, ಮಶೂದ್ ಅರಂತೋಡು, ಸಲಾವುದ್ದಿನ್ ಸಂಪಾಜೆ ಮೊದಲಾದವರು ಉಪಸ್ಥಿತರಿದ್ದರು. ಎಸ್ಡಿಪಿಐ ಸಂಪಾಜೆ ಗ್ರಾಮ ಸಮಿತಿ ಸದಸ್ಯರಾದ ಫಾರೂಕ್ ಕಾನಕ್ಕೋಡ್ ಸ್ವಾಗತಿಸಿ, ಎಸ್ಡಿಪಿಐ ಕಡೆಪಾಲ ಬೂತ್ ಸಮಿತಿ ಕಾರ್ಯದರ್ಶಿ ಮರ್ಜೂಕ್ ಕಡೆಪಾಲ ವಂದಿಸಿದರು.

Also Read  ಸಾಮಾಜಿಕ ನ್ಯಾಯಕ್ಕಾಗಿ ಆಗ್ರಹಿಸಿ SDPI ವತಿಯಿಂದ ಚಲೋ ಬೆಳಗಾವಿ ಜಾಥಾ

error: Content is protected !!
Scroll to Top