ಬೆಳ್ತಂಗಡಿ: ಕೇಂದ್ರ ಸರಕಾರದ ನೀತಿಯ ವಿರುದ್ದ ಕಾಂಗ್ರೆಸ್ ಪ್ರತಿಭಟನೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜೂ. 20. ಬಡವರ ಅನ್ನಭಾಗ್ಯವನ್ನು ಕಸಿದುಕೊಂಡ ಕೇಂದ್ರ ಸರಕಾರದ ನೀತಿಯ ವಿರುದ್ದ ಕಾಂಗ್ರೆಸ್ ಪಕ್ಷದ ವತಿಯಿಂದ ಬೆಳ್ತಂಗಡಿಯಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ವಸಂತ ಬಂಗೇರ, ಕೇಂದ್ರ ಸರಕಾರ ಬಡವರಿಗೆ ವಿತರಿಸಲು ಅಕ್ಕಿ ನೀಡದೇ ಬಡವರ ಅನ್ನವನ್ನು ಕಸಿದುಕೊಂಡಿದೆ. ಈ ಸರಕಾರಕ್ಕೆ ಮುಂದಿನ ಚುನಾವಣೆಯಲ್ಲಿ ಜನರೇ ಉತ್ತರ ನೀಡಲಿದ್ದಾರೆ ಎಂದರು. ಯಾರು ಏನೇ ಮಾಡಿದರೂ ರಾಜ್ಯ ಸರಕಾರ ತಾನು ನೀಡಿದ ಭರವಸೆಗಳನ್ನು ಈಡೇರಿಸಲಿದೆ. ಬಿಜೆಪಿಗೆ ತಾಕತ್ತಿದ್ದರೆ ಅದನ್ನು ತಡೆಯಲಿ ಎಂದು ಸವಾಲೆಸೆದರು. “ಅನ್ನ ಕಸಿದ ಬಿಜೆಪಿ ಸರಕಾರಕ್ಕೆ ಧಿಕ್ಕಾರ” ಎಂಬ ಘೋಷಣೆ ಕೂಗುತ್ತಾ ತಟ್ಟೆ ಬಡಿಯುತ್ತಾ ಕಾಂಗ್ರೆಸ್ ಕಾರ್ಯಕರ್ತರು ಬೆಳ್ತಂಗಡಿ ಬಸ್ ನಿಲ್ದಾಣದಿಂದ ಮಿನಿವಿಧಾನ ಸೌಧದವರೆಗೆ ಮೆರವಣಿಗೆ ನಡೆಸಿ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಮುಖಂಡರುಗಳಾದ ಶೇಖರ ಕುಕ್ಕೇಡಿ, ಧರಣೇಂದ್ರ ಕುಮಾರ್, ನಮಿತ, ಜಯವಿಕ್ರಮ, ರಾಜು ಪೂಜಾರಿ, ಸತೀಶ್ ಕಾಶಿಪಟ್ಣ, ವಂದನಾ ಭಂಡಾರಿ, ಪ್ರವೀಣ್ ಗೌಡ, ಜೆಸಿಂತಾ ಮೋನಿಸ್, ಅಯ್ಯೂಬ್ ಡಿ.ಕೆ, ವಿನ್ಸೆಂಟ್ ಡಿಸೋಜಾ, ಇಸ್ಮಾಯಿಲ್ ಪೆರಿಂಜೆ ಹಾಗೂ ಕರೀಂ ಗೇರುಕಟ್ಟೆ ಮೊದಲಾದವರು ಭಾಗವಹಿಸಿದ್ದರು.

Also Read  ವಿಧಾನ ಸಭಾ ಚುನಾವಣಾ ಹಿನ್ನೆಲೆ: ಕಡಬ ತಾಲೂಕಿನ ಇಬ್ಬರು ಸೇರಿದಂತೆ 11 ಮಂದಿಯ ಗಡಿಪಾರು ಆದೇಶ

error: Content is protected !!
Scroll to Top