(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ. 19. ಮುಂಗಾರು ಆರಂಭವಾಗಿ 3 ವಾರ ಕಳೆದರೂ ನಿರೀಕ್ಷಿತ ಮಳೆ ಬೀಳದ ಹಿನ್ನೆಲೆ ರಾಜ್ಯಕ್ಕೆ ಬರಗಾಲದ ಭೀತಿ ಎದುರಾಗಿದೆ.
ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಪ್ರಕಾರ, 11 ಜಿಲ್ಲೆಗಳಲ್ಲಿ ಶೇ.29ರಿಂದ ಶೇ.59ರಷ್ಟು ಮಳೆ ಕೊರತೆ ಇದೆ. ಜೂ. 01ರಿಂದ ಸರಾಸರಿ 100mm ಮಳೆಯಾಗಬೇಕಿದ್ದು, ಆದರೆ ಕೇವಲ 30mm ಮಾತ್ರ ಮಳೆಯಾಗಿದೆ. ಅಲ್ಲದೇ ಸುಮಾರು 20 ಜಿಲ್ಲೆಗಳಲ್ಲಿ ಸ್ವಲ್ಪ ಪ್ರಮಾಣದ ಮಳೆಯಾಗಿದೆ. ಮಳೆ ಬಾರದೇ ರೈತಾಪಿ ವರ್ಗ ಮುಗಿಲಿನತ್ತ ನೋಡುವ ಪರಿಸ್ಥಿತಿ ಎದುರಾಗಿದೆ. ಮಳೆ ಕೊರತೆಯಿಂದಾಗಿ ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯಕ್ಕೂ ಹಿನ್ನಡೆಯಾಗಿದೆ ಎನ್ನುತ್ತಿದ್ದಾರೆ ತಜ್ಞರು. ಕಳೆದ ವಾರವೇ ಕೇರಳಕ್ಕೆ ಮುಂಗಾರು ಪ್ರವೇಶ ಆಗಿದ್ದರೂ ಕೂಡಾ ಅಲ್ಲಿಯೂ ಮುಂಗಾರಿನ ಅಬ್ಬರ ಕಾಣಸಿಗುತ್ತಿಲ್ಲ. ನಮ್ಮ ರಾಜ್ಯದಲ್ಲೂ ಮಾನ್ಸೂನ್ ಪ್ರವೇಶದ ಬಳಿಕ ಆಗಬೇಕಾಗಿದ್ದ ವ್ಯಾಪಕ ಮಳೆ ಕಾಣಿಸುತ್ತಿಲ್ಲ. ಅದರಲ್ಲೂ ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನಲ್ಲಿ ಅಬ್ಬರದ ಮಳೆ ಕಣ್ಮರೆಯಾಗಿದೆ..