ಮಂಗಳೂರಿನಲ್ಲಿ ಆ್ಯಂಟಿ ಕಮ್ಯುನಲ್ ವಿಂಗ್ ಕಾರ್ಯಾರಂಭ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 15. ನೂತನ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರ ಸೂಚನೆಯನುಸಾರ ಮಂಗಳೂರಿನಲ್ಲಿ ಆ್ಯಂಟಿ ಕಮ್ಯೂನಲ್ ವಿಂಗ್ ಕಾರ್ಯಾರಂಭಗೊಂಡಿದೆ.

ಈ ಕುರಿತು ಮಾತನಾಡಿದ ಮಂಗಳೂರು ಕಮಿಷನರ್ ಕುಲದೀಪ್ ಕುಮಾರ್ ಜೈನ್, ಗೃಹ ಸಚಿವರಾಗಿ ಮಂಗಳೂರಿಗೆ ಪ್ರಥಮವಾಗಿ ಭೇಟಿ ನೀಡಿದ ಸಂದರ್ಭ ಡಾ.ಜಿ.ಪರಮೇಶ್ ಅವರು ಆ್ಯಂಟಿ ಕಮ್ಯೂನಲ್ ವಿಂಗ್ ಸ್ಥಾಪಿಸಲಾಗುತ್ತದೆ ಎಂದು ಘೋಷಿಸಿದ್ದರು. ಅವರ ಸೂಚನೆಯಂತೆ ನಗರದಲ್ಲಿ ಆ್ಯಂಟಿ ಕಮ್ಯೂನಲ್ ವಿಂಗ್ ಕಳೆದರೆಡು ದಿನದ ಹಿಂದೆ ಸಿಟಿ ಸ್ಪೆಷಲ್ ಬ್ರಾಂಚ್ (ಸಿ ಎಸ್ ಬಿ) ಇನ್ ಸ್ಪೆಕ್ಟರ್ ಶರೀಫ್ ನೇತೃತ್ವದಲ್ಲಿ ಕಾರ್ಯಾರಂಭಗೊಂಡಿದೆ. ಸಿ ಎಸ್ ಬಿ ಇನ್ ಸ್ಪೆಕ್ಟರ್, ಸಿಸಿಬಿ, ಎಸಿಪಿ ಪಿ.ಎ.ಹೆಗ್ಡೆ ಹಾಗೂ ಐದು ಮಂದಿಯ ತಂಡ ಇದರ ಮೇಲುಸ್ತುವಾರಿ ನೋಡಿಕೊಳ್ಳಲಿದೆ. ಈ ಬಗ್ಗೆ ಏನೇ ವಿಚಾರಗಳಿದ್ದರೂ ನೇರವಾಗಿ ಪೊಲೀಸ್ ಕಮೀಷನರ್ ಗೆ ತಂಡ ವರದಿ ಸಲ್ಲಿಸಲಿದೆ ಎಂದರು.

Also Read  ಸುಳ್ಯ: ಮಳೆಯ ಅಬ್ಬರ- ಓರ್ವ ನೀರು ಪಾಲು

ಆ್ಯಂಟಿ ಕಮ್ಯೂನಲ್ ವಿಂಗ್ ಎಲ್ಲಾ ರೀತಿಯ ಕೋಮು ಪ್ರಕರಣಗಳು ಹಾಗೂ ಆರೋಪಿಗಳ ಬಗ್ಗೆ ನಿಗಾವಹಿಸಲಿದೆ. ಕಳೆದ 10 ವರ್ಷಗಳಿಂದ ಮಂಗಳೂರು ನಗರದಲ್ಲಿ ನಡೆದ ಸುಮಾರು 200 ಪ್ರಕರಣಗಳ ಬಗ್ಗೆ ಈಗಾಗಲೇ ಗಮನಹರಿಸಲಾಗಿದೆ. ಹಿಂದಿನ ಎಲ್ಲಾ ಪ್ರಕರಣಗಳ ಸಂಬಂಧ ನ್ಯಾಯಾಲಯದ ವಿಚಾರಣೆಗಳ ಬಗ್ಗೆ ನಿಗಾವಹಿಸಲಿದ್ದು, ಸಂತ್ರಸ್ತರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲಿದೆ ಎಂದರು. ಕೋಮುದ್ವೇಷ ಮೂಡಿಸುವಂತ ದ್ವೇಷ ಭಾಷಣ, ನೈತಿಕ ಪೊಲೀಸ್ ಗಿರಿ, ಸಾಮಾಜಿಕ ಜಾಲತಾಣದಲ್ಲಿ ದ್ವೇಷ ಹರಡುವುದು, ದನಗಳ್ಳತನ, ಕೋಮುದ್ವೇಷ ಭಾವನೆಯ ಕೊಲೆ ಪ್ರಕರಣಗಳ ಬಗ್ಗೆ ಈ ತಂಡ ನಿಗಾವಹಿಸಲಿದೆ. ಯಾವುದೇ ಘಟನೆ ನಡೆದಾಗ ಆಯಾ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿ ಆ ಬಳಿಕ ಆ್ಯಂಟಿ ಕಮ್ಯೂನಲ್ ವಿಂಗ್ ಕ್ರಮ ಕೈಗೊಳ್ಳಲಿದೆ ಎಂದು ಕುಲದೀಪ್ ಕುಮಾರ್ ಆರ್.ಜೈನ್ ತಿಳಿಸಿದರು.

Also Read  ನೆಲ್ಯಾಡಿ ಬೆಥನಿ ಐಟಿಐ ರಜತೋತ್ಸವದ ಪ್ರಯುಕ್ತ ಶಟ್ಲ್ ಬ್ಯಾಡ್ಮಿಂಟನ್ ➤ ಮ್ಯಾನೇಜ್ಮೆಂಟ್ ತಂಡ ಪ್ರಥಮ

error: Content is protected !!
Scroll to Top